ಪಾಕ್‌ನಿಂದ ಅಪ್ರಚೋದಿತ ದಾಳಿ: 9 ಸೈನಿಕರ ಸಾವು
ಜಮ್ಮು, ಸೆ. 4 (ಪಿಟಿಐ)– ಪಾಕಿಸ್ತಾನವು ಕಾರ್ಗಿಲ್ ವಲಯದ ಮುಂಚೂಣಿಯಲ್ಲಿರುವ ಟರ್ಟೊಕ್ ಪ್ರದೇಶದ ಭಾರತೀಯ ಠಾಣೆಗಳ ಮೇಲೆ ನಿನ್ನೆ ರಾತ್ರಿಯಿಂದ ಅಪ್ರಚೋದಿತವಾಗಿ ಭಾರಿ ಷೆಲ್ಲಿಂಗ್ ನಡೆಸಿದ್ದು, 9 ಭಾರತೀಯ ಸೈನಿಕರು ಸತ್ತಿದ್ದಾರೆ.
ಈ ಷೆಲ್ಲಿಂಗ್‌ನಲ್ಲಿ 10 ಸೈನಿಕರ ಸಹಿತ 12 ಜನರಿಗೆ ಗಾಯಗಳಾಗಿವೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದರು. ಇದಕ್ಕೆ ಭಾರತೀಯ ಪಡೆಗಳೂ ಪ್ರತ್ಯುತ್ತರ ನೀಡಿದ್ದು, ಪಾಕಿಸ್ತಾನಿ ಪಡೆಗಳಲ್ಲಿ ಉಂಟಾಗಿರುವ ಸಾವು–ನೋವಿನ ವರದಿಗಳು ಇನ್ನೂ ಲಭ್ಯವಾಗಿಲ್ಲ.
ಕಂಪ್ಯೂಟರೀಕೃತ ಬಿಲ್ ನೀಡಲು ವಿದ್ಯುತ್ ನಿಗಮ ಸಜ್ಜು
ಬೆಂಗಳೂರು, ಸೆ. 4 – ಕೈಯಿಂದ ಬರೆದ ಬಿಲ್‌ಗಳ ಬದಲಾಗಿ ಕಂಪ್ಯೂಟರೀಕೃತ ಲೇಸರ್ ತಂತ್ರಜ್ಞಾನ ಬಿಲ್‌ಗಳನ್ನು ಗ್ರಾಹಕರಿಗೆ ಒದಗಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಸಜ್ಜಾಗಿದೆ.
ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ನಿಗಮ ಮಾಡಿಕೊಂಡಿದ್ದು ಈ ತಿಂಗಳ ಅಂತ್ಯದಲ್ಲಿ ಎರಡು ಉಪವಿಭಾಗಗಳಲ್ಲಿ ಕಂಪ್ಯೂಟರೀಕೃತ ಬಿಲ್‌ಗಳನ್ನು ಪರೀಕ್ಷಾರ್ಥವಾಗಿ ನೀಡಲಿದೆ ಎಂದು ನಿಗಮದ ಹೆಚ್ಚುವರಿ ಕಾರ್ಯದರ್ಶಿ ಬಿ.ಟಿ. ಜ್ಞಾನೇಶ್ವರ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.