ADVERTISEMENT

25 ವರ್ಷಗಳ ಹಿಂದೆ ಈ ದಿನ: ಪಟೇಲ್‌ ಅನ್ನನಾಳಕ್ಕೆ ಬ್ಯಾಂಡಿಂಗ್‌ ಚಿಕಿತ್ಸೆ

ಪ್ರಜಾವಾಣಿ ವಿಶೇಷ
Published 8 ಮೇ 2025, 20:16 IST
Last Updated 8 ಮೇ 2025, 20:16 IST
<div class="paragraphs"><p>25 ವರ್ಷಗಳ ಹಿಂದೆ&nbsp;ಈ ದಿನ</p></div>

25 ವರ್ಷಗಳ ಹಿಂದೆ ಈ ದಿನ

   

ಪಿಯುಸಿ: ಮೌಲ್ಯಮಾಪನ ಬಹಿಷ್ಕಾರ ಮುಂದುವರಿಕೆ

ಬೆಂಗಳೂರು, ಮೇ 8– ಎಷ್ಟೇ ಒತ್ತಡ ಬಂದರೂ ಬೇಡಿಕೆ ಈಡೇರಿಸುವ ತನಕ ಪದವಿಪೂರ್ವ ತರಗತಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕಾರ ಮುಂದುವರಿಸುವ ನಿರ್ಧಾರವನ್ನು ಇಂದು ಇಲ್ಲಿ ಸಭೆ ಸೇರಿದ್ದ ಕಾಲೇಜು ಅಧ್ಯಾಪಕರು ಪುನರುಚ್ಛರಿಸಿದ್ದರಿಂದ ಸಮಸ್ಯೆ ಇನ್ನಷ್ಟು ಕಗ್ಗಂಟಾಗಿದೆ.

ADVERTISEMENT

ಸರ್ಕಾರ ಮತ್ತು ಶಿಕ್ಷಕರ ನಡುವಣ ಸಂಘರ್ಷದಿಂದ ಈಗ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನದಲ್ಲಿದೆ.

ಅನೇಕ ದಿನಗಳಿಂದಲೂ ಅಧ್ಯಾಪಕರು ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟಿಸುತ್ತಿದ್ದರೂ ಸರ್ಕಾರ ಅವರ ಬೇಡಿಕೆಗಳನ್ನು ತಿರಸ್ಕರಿಸುತ್ತಾ ಕಟು ಧೋರಣೆ ತಳೆದಿರುವ ಹಿನ್ನೆಲೆಯಲ್ಲಿ ರಾಜ್ಯ ಪದವಿ ಪೂರ್ವ ಶಿಕ್ಷಣದ ಅಧಿಕಾರಿಗಳ, ಪ್ರಾಂಶುಪಾಲರ, ಉಪನ್ಯಾಸಕರ ಮತ್ತು ಬೋಧಕೇತರರ ಒಕ್ಕೂಟದ ಸಭೆ ನಡೆಸಿ ಬೇಡಿಕೆಗಳ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಹೋರಾಟ ಮುಂದುವರಿಸಲು ಸರ್ವಸಮ್ಮತ ನಿರ್ಧಾರ ಕೈಗೊಳ್ಳಲಾಯಿತು.

ಪಟೇಲ್‌ ಅನ್ನನಾಳಕ್ಕೆ ಬ್ಯಾಂಡಿಂಗ್‌ ಚಿಕಿತ್ಸೆ

ನವದೆಹಲಿ, ಮೇ. 8– ಕಾಮಾಲೆ ವ್ಯಾಧಿಯಿಂದ ಗುಣಮುಖರಾಗಲು ಕಳೆದ ಹತ್ತು ದಿನಗಳಿಂದ ಇಲ್ಲಿನ ಜಿ.ಬಿ.ಪಂತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರ ಅನ್ನನಾಳಕ್ಕೆ ಇಂದು ಬ್ಯಾಂಡಿಂಗ್‌ ಚಿಕಿತ್ಸೆ ನಡೆಸಲಾಯಿತು.

ಪಟೇಲ್‌ ಅವರು ಈ ಚಿಕಿತ್ಸೆಯ ನಂತರ ಕರ್ನಾಟಕ ಭವನಕ್ಕೆ ಮರಳಿ ವಿಶಾಂತ್ರಿ ಪಡೆಯುತ್ತಿದ್ದಾರೆ.

ಪಟೇಲ್‌ ಅವರ ಆರೋಗ್ಯ ಸುಧಾರಿಸಿದ್ದು, ಅವರು ಇನ್ನೆರಡು ದಿನಗಳ ಕಾಲ ದೆಹಲಿಯಲ್ಲಿಯೇ ಇರಬೇಕಾಗುತ್ತದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ಡಾ. ಚಂದ್ರಶೇಖರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.