ADVERTISEMENT

25 ವರ್ಷಗಳ ಹಿಂದೆ: 29–6–1997

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 20:30 IST
Last Updated 28 ಜೂನ್ 2022, 20:30 IST
   

ಲಾಲೂ ಬೆಂಬಲಿಗರಿಂದ ಚುನಾವಣೆ ಬಹಿಷ್ಕಾರ: ದಳ ಒಡಕು ಸನ್ನಿಹಿತ

ನವದೆಹಲಿ, ಜೂನ್‌ 28 – ಜನತಾದಳದ ಸಾಂಸ್ಥಿಕ ಚುನಾವಣೆಗಳನ್ನು ಬಹಿಷ್ಕರಿಸಿ, ಹೊಸ ಪಕ್ಷ ಸ್ಥಾಪನೆ ಮಾಡಲು ಬಿಹಾರದ ಮುಖ್ಯಮಂತ್ರಿ ಲಾಲೂಪ್ರಸಾದ್‌ ಯಾದವ್‌ ಅವರ ಬೆಂಬಲಿಗರು ಇಂದು ನಿರ್ಧರಿಸಿದ್ದರಿಂದ ಜನತಾದಳದ ವಿಭಜನೆ ಸನ್ನಿಹಿತ ಎನಿಸಿದೆ. ಇಂದು ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ, ದಳ ಚುನಾವಣೆಯ ಉಸ್ತುವಾರಿಗಾಗಿ ನೇಮಕಗೊಂಡಿದ್ದ ಯಾದವ್ ಬೆಂಬಲಿಗ, ಕೇಂದ್ರ ಸಚಿವ ರಘುವಂಶ ಪ್ರಸಾದ್‌ ಸಿಂಗ್‌ ಅವರನ್ನು ಸುಪ್ರೀಂ ಕೊರ್ಟ್‌ ಇಂದು ವಜಾ ಮಾಡಿ, ಜುಲೈ ಮೂರರ ಒಳಗೆ ಪಕ್ಷದ ಸಾಂಸ್ಥಿಕ ಚುನಾವಣೆಗಳನ್ನು ಪೂರ್ಣಗೊಳಿಸುವಂತೆ ಪ್ರೊ. ಮಧುದಂಡವತೆ ಅವರಿಗೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT