ADVERTISEMENT

50 ವರ್ಷಗಳ ಹಿಂದೆ ಈ ದಿನ: ಪಾಕ್‌ಗೆ ಯುದ್ಧ ವಿಮಾನ ಘಟಕ

50 ವರ್ಷಗಳ ಹಿಂದೆ ಈ ದಿನ: ಪಾಕ್‌ಗೆ ಯುದ್ಧ ವಿಮಾನ ಘಟಕ

ಪ್ರಜಾವಾಣಿ ವಿಶೇಷ
Published 7 ಜನವರಿ 2024, 19:21 IST
Last Updated 7 ಜನವರಿ 2024, 19:21 IST
<div class="paragraphs"><p>50 ವರ್ಷಗಳ ಹಿಂದೆ </p></div>

50 ವರ್ಷಗಳ ಹಿಂದೆ

   

ಪಾಕ್‌ಗೆ ಯುದ್ಧ ವಿಮಾನ ಘಟಕ: ಫ್ರೆಂಚ್ ರಾಯಭಾರಿಗೆ ಭಾರತದ ಕಳವಳ ರವಾನೆ

ನವದೆಹಲಿ, ಜ. 7– ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡಲು ಫ್ರಾನ್ಸ್ ಒಪ್ಪಂದ ಮಾಡಿಕೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಂದು ಫ್ರೆಂಚ್ ರಾಯಭಾರಿ ಜರ್‌ಗೆನ್‌ಸೆನ್ ಅವರನ್ನು ವಿದೇಶಾಂಗ ಕಚೇರಿಗೆ ಕರೆಸಿಕೊಂಡು, ಆ ವರದಿಗಳ ಬಗೆಗೆ ಭಾರತ ತನ್ನ ಕಳವಳವನ್ನು ವ್ಯಕ್ತಪಡಿಸಿತು. 

ADVERTISEMENT

ಮಿರೇಜ್ ಯುದ್ಧ ವಿಮಾನಗಳ ಉತ್ಪಾದನೆಗೆ ಪಾಕಿಸ್ತಾನದಲ್ಲಿ ಕಾರ್ಖಾನೆ ನಿರ್ಮಿಸಲು ನೆರವಾಗಲು ಫ್ರಾನ್ಸ್ ನಿರ್ಧರಿಸಿದೆ ಎಂಬ ವಿಷಯವನ್ನು, ವಿದೇಶಾಂಗ ವ್ಯವಹಾರ ಸಚಿವ ಖಾತೆ ಕಾರ್ಯದರ್ಶಿ ವಿ.ಸಿ. ತ್ರಿವೇದಿ ಅವರು ಫ್ರೆಂಚ್ ರಾಯಭಾರಿ ಜೊತೆ ನಡೆಸಿದ ಮಾತುಕತೆಯಲ್ಲಿ ಪ್ರಸ್ತಾಪಿಸಲಾಯಿತು.  

ಬೆಂಗಳೂರು–ಮೈಸೂರು ಬ್ರಾಡ್‌ಗೇಜ್ ಮಾರ್ಗ ಪರಿಶೀಲನೆಯಲ್ಲಿ

ಮದರಾಸ್, ಜ. 7– ಬೆಂಗಳೂರು–ಮೈಸೂರು ರೈಲು ಮಾರ್ಗವನ್ನು ಬ್ರಾಡ್‌ಗೇಜ್ ಮಾರ್ಗವಾಗಿ ಪರಿವರ್ತಿಸುವ ಸಲಹೆಯನ್ನು ರೈಲ್ವೆಯು ಪರಿಶೀಲಿಸುತ್ತಿದೆ ಎಂದು ರೈಲ್ವೆ ಮಂತ್ರಿ ಎಲ್. ಎನ್. ಮಿಶ್ರಾ ಹೇಳಿದರು. 

ರೈಲ್ವೆ ಬಳಕೆದಾರರ ವಲಯ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಈ ಯೋಜನೆ ಬಗ್ಗೆ ಈಗಾಗಲೇ ಸಮೀಕ್ಷೆ ನಡೆದಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.