25 ವರ್ಷಗಳ ಹಿಂದೆ ಈ ದಿನ
51 ಮಂದಿ ಟಾಡಾ ಬಂದಿಗಳ ಮೊಕದ್ದಮೆ ವಾಪಸ್ಸಿಗೆ ಅಸ್ತು
ಮೈಸೂರು, ಆಗಸ್ಟ್ 19– ಟಾಡಾ ಕಾಯ್ದೆಯನ್ವಯ ಬಂಧನದಲ್ಲಿರುವ ಮತ್ತು ಜಾಮೀನಿನ ಮೇಲೆ ಬಿಡುಗಡೆ ಯಾಗಿರುವ ವೀರಪ್ಪನ್‌ನ ಎಲ್ಲ ಸಹಚರರು ಮತ್ತು ಅವನಿಗೆ ನೆರವು ನೀಡಿದವರ ಮೇಲಿನ ಆರೋಪಗಳನ್ನು ಹಿಂದಕ್ಕೆ ಪಡೆಯಲು ಇಲ್ಲಿನ ವಿಶೇಷ ಟಾಡಾ ನ್ಯಾಯಾಲಯ ಅನುಮತಿ ನೀಡಿದೆ.
ನ್ಯಾಯಾಧೀಶರ ಈ ತೀರ್ಪಿನಿಂದಾಗಿ ಮೈಸೂರು ಸೆಂಟ್ರಲ್ ಜೈಲಿನಲ್ಲಿರುವ 51 ಟಾಡಾಬಂದಿಗಳು, ಜಾಮೀನು ಪಡೆದು ಹೊರಬರಲು ಸಾಧ್ಯವಾಗುತ್ತದೆ.
ವಿವಾದದಲ್ಲಿ ದಾಂಡೇಲಿ ಮಿನಿ ಜಲವಿದ್ಯುತ್
ಕಾರವಾರ, ಆಗಸ್ಟ್ 19– ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿಯ ಮೌಳಿಂಗ ಹತ್ತಿರ ಕಾಳಿ ನದಿಗೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸಲು ಉದ್ದೇಶಿಸಿರುವ ‘ದಾಂಡೇಲಿ ಮಿನಿ ಜಲವಿದ್ಯುತ್ ಯೋಜನೆ’ಯಿಂದ ಪರಿಸರಕ್ಕೆ ಯಾವುದೇ ಧಕ್ಕೆಯಾಗು ವುದಿಲ್ಲ ಎಂದು ಯೋಜನೆಯ ಕಾರ್ಯ ನಿರ್ವಾಹಕ ಸಾರಾಂಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.