ADVERTISEMENT

25 ವರ್ಷಗಳ ಹಿಂದೆ 8.10.1997, ಬುಧವಾರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 19:18 IST
Last Updated 7 ಅಕ್ಟೋಬರ್ 2022, 19:18 IST
   

ಕೊನೆಗೂ ನಿಗದಿತ ಕಕ್ಷೆ ಸೇರಿದ ಐಆರ್‌ಎಸ್‌–1ಡಿ ಉಪಗ್ರಹ

ಬೆಂಗಳೂರು, ಅ. 7– ಕಳೆದ ವಾರ ಬಾಹ್ಯಾಕಾಶಕ್ಕೆ ಹಾರಿಬಿಡಲಾದಐಆರ್‌ಎಸ್‌–1ಡಿ ಉಪಗ್ರಹವನ್ನು ಕಾರ್ಯನಿರ್ವಹಣಾ ಕಕ್ಷೆಗೆ ಸೇರಿಸುವಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಇಂದು ಯಶಸ್ವಿಯಾದರು.

ಸ್ವದೇಶಿ ನಿರ್ಮಿತ ಉಪಗ್ರಹ ವಾಹಕ ‍‍ಪಿಎಸ್‌ಎಲ್‌ಎ ಮೂಲಕ ಗಗನಕ್ಕೆ ಚಿಮ್ಮಲಾಗಿದ್ದ ಐಆರ್‌ಎಸ್‌–1ಡಿ ಅನ್ನು ಕಾರ್ಯನಿರ್ವಹಣಾ ಕಕ್ಷೆಗೆ ಸೇರಿಸಲು ನಿನ್ನೆಯವರೆಗೆ ಇಸ್ರೊ ವಿಜ್ಞಾನಿಗಳುವಿಫಲರಾಗಿದ್ದರು.‌

ADVERTISEMENT

ರಕ್ಷಣಾ ಒಪ್ಪಂದ ವಿಸ್ತರಣೆಗೆ ರಷ್ಯಾ ಒಪ್ಪಿಗೆ

ಮಾಸ್ಕೊ, ಅ. 7 (ಎಪಿ): ಭಾರತ ಮತ್ತು ರಷ್ಯಾ ನಡುವಿನ ಬಹುಕಾಲದ ರಕ್ಷಣಾ ಒ‍ಪ್ಪಂದವನ್ನು ವಿಸ್ತರಿಸಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ.

ರಕ್ಷಣಾ ಸಚಿವ ಮುಲಾಯಂ ಸಿಂಗ್‌ ಯಾದವ್‌ ಅವರು ರಷ್ಯಾ ಭೇಟಿಯ ಸಂದರ್ಭದಲ್ಲಿ ರಷ್ಯಾದ ರಕ್ಷಣಾ ಇಲಾಖೆಯ ಜನರಲ್‌ ಐಗೊರ್‌ ಸರ್ಜ್‌ಯೊಬ್‌ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಈ ನಿರ್ಧಾರವನ್ನು ಜಂಟಿಯಾಗಿ ಪ್ರಕಟಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.