ಪಾಕ್ ಸೈನಿಕರ ತೆರವಿಗೆ ಭಾರತ ಗಡುವು, ವಾಯುದಾಳಿ ಸ್ಥಗಿತ
ನವದೆಹಲಿ, ಜುಲೈ 12– ಪಾಕಿಸ್ತಾನಿ ಸೇನೆಯು ಕಾರ್ಗಿಲ್ ವಲಯದಿಂದ ಕಾಲ್ತೆಗೆ
ಯುತ್ತಿರುವುದರಿಂದ ಭಾರತವು ತನ್ನ ವಾಯುಪಡೆಯ ದಾಳಿಯನ್ನು ಸ್ಥಗಿತಗೊಳಿಸಿದೆ. ಭೂ ಸೇನೆಯು ಸಹಾ ಪಾಕಿಸ್ತಾನಿ ಸೈನಿಕರು ವಾಪಸಾಗುತ್ತಿರುವ ಕಡೆಗಳಲ್ಲಿ ತನ್ನ ಕಾರ್ಯಾಚರಣೆಯನ್ನು 16ರ ಬೆಳಿಗ್ಗೆವರೆಗೆ ಸ್ಥಗಿತಗೊಳಿಸಿದೆ.
ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರ ನಡುವೆ ನಿನ್ನೆ ಮಧ್ಯಾಹ್ನ ಒಂದೂವರೆ ಗಂಟೆಯಲ್ಲಿ ಆಗಿರುವ ಒಪ್ಪಂದದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೇರಳ: ಸಾರ್ವಜನಿಕ ಧೂಮಪಾನ ನಿಷೇಧ
ಕೊಚ್ಚಿ, ಜುಲೈ 12 (ಪಿಟಿಐ)– ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಿರುವ ಕೇರಳದ ಹೈಕೋರ್ಟ್, ತನ್ನ ಆದೇಶವನ್ನು ತಕ್ಷಣವೇ ಜಾರಿಗೆ ತರುವಂತೆ ಇಂದು ಜಿಲ್ಲಾ ಆಡಳಿತಗಳಿಗೆ ಆಜ್ಞೆ ಮಾಡಿತು.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ.ಆರ್. ಲಕ್ಷ್ಮಣನ್ ಹಾಗೂ ನ್ಯಾಯಮೂರ್ತಿ ಕೆ. ನಾರಾಯಣ ಕುರುಪ್ ಅವರಿದ್ದ ವಿಭಾಗೀಯ ಪೀಠವು, ನ್ಯಾಯಾಲಯದ ಆಜ್ಞೆಯನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ತಾಕೀತು ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.