
ಪ್ರಜಾವಾಣಿ ವಾರ್ತೆ
ಬೆಂಗಳೂರು, ನ.22– ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳ ನೆರವು ಮತ್ತು ಸಹಕಾರ ಪಡೆದು ಕರ್ನಾಟಕವನ್ನು ‘ವೀರಪ್ಪನ್ ಪಿಡುಗಿನಿಂದ’ ಮುಕ್ತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ವಿಧಾನಸಭೆಯಲ್ಲಿ ಇಂದು ಆಶ್ವಾಸನೆ ನೀಡಿದರು.
ವೀರಪ್ಪನ್ ಪ್ರಕರಣ ಕರ್ನಾಟಕಕ್ಕೆ ಕಪ್ಪುಚುಕ್ಕೆಯಾಗಿದೆ ಎಂದ ಅವರು, ವೀರಪ್ಪನ್ ಹಾವಳಿ, ರಾಜ್‌ಕುಮಾರ್ ಅಪಹರಣ ಹಾಗೂ ಅವರ ಬಿಡುಗಡೆವರೆಗಿನ ಘಟನಾವಳಿಗಳನ್ನು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.