ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ 22,1996

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 18:30 IST
Last Updated 21 ನವೆಂಬರ್ 2021, 18:30 IST
   

ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಿಗೆ ಶಾಶ್ವತ ನೆರವು ಸಂಭವ

ಬೆಂಗಳೂರು, ನ. 21– ಪಂಚಾಯತ್‌ ವ್ಯವಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳನ್ನು ಶಾಶ್ವತ ನೆರವಿನ ವ್ಯಾಪ್ತಿಯಲ್ಲಿ ತರಬೇಕೆಂದು ಡಾ.ಜಿ.ತಿಮ್ಮಯ್ಯ ಸಮಿತಿ ಮಾಡಿರುವ ಶಿಫಾರಸನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ. ಇದು ಜಾರಿಗೆ ಬಂದಲ್ಲಿ ರಾಜ್ಯದ ಆದಾಯದ ಶೇ 36ರಷ್ಟು ಹಣ ಪಂಚಾಯತ್‌ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ದೊರೆಯಲಿದೆ ಎಂದು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಇಲ್ಲಿ ಹೇಳಿದರು.

ಪ್ರತಿಭಟನಕಾರರ ಜೊತೆ ಚರ್ಚೆಗೆ ಅಮಿತಾಭ್‌ ಅಪೇಕ್ಷೆ

ADVERTISEMENT

ಬೆಂಗಳೂರು, ನ. 21– ವಿಶ್ವಸುಂದರಿ ಸ್ಪರ್ಧೆಯನ್ನು ವಿರೋಧಿಸುತ್ತಿರುವ ಸಂಘ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲು ತಾವು ಸಿದ್ಧ ಎಂದು ಪ್ರಕಟಿಸಿದ ಎಬಿಸಿಎಲ್‌ ಸಂಸ್ಥೆಯ ಅಧ್ಯಕ್ಷ ಹಾಗೂ ಹಿಂದಿ ಸೂಪರ್‌ ಸ್ಟಾರ್ ಅಮಿತಾಭ್ ಬಚ್ಚನ್‌, ಸ್ಪರ್ಧೆಯ ವಿರುದ್ಧ ನಡೆಸುತ್ತಿರುವ ಚಳವಳಿಯನ್ನು ಅಂತ್ಯಗೊಳಿಸುವಂತೆ ಪ್ರತಿಭಟನಕಾರರಲ್ಲಿ ಮನವಿ ಮಾಡಿದರು.

‘ತಪ್ಪು ತಿಳಿವಳಿಕೆಯಿಂದಾಗಿ ಕೆಲವರು ಸ್ಪರ್ಧೆಯನ್ನು ವಿರೋಧಿಸುತ್ತಿದ್ದಾರೆ. ಅಂಥವರು ಬಂದು ನನ್ನನ್ನು
ಭೇಟಿ ಮಾಡಿ ಮಾತುಕತೆ ನಡೆಸಿದರೆ, ಸ್ಪರ್ಧೆಯ ಬಗ್ಗೆ ಅವರಲ್ಲಿರುವ ತಪ್ಪುತಿಳಿವಳಿಕೆಯನ್ನು ನಿವಾರಿಸುತ್ತೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.