ADVERTISEMENT

25 ವರ್ಷಗಳ ಹಿಂದೆ: ಶನಿವಾರ 2.8.1997

ಪ್ರಜಾವಾಣಿ ವಿಶೇಷ
Published 1 ಆಗಸ್ಟ್ 2022, 20:15 IST
Last Updated 1 ಆಗಸ್ಟ್ 2022, 20:15 IST
   

ಬಿಹಾರ ಬಂದ್; ವ್ಯಾಪಕ ಹಿಂಸಾಚಾರ

ಪಟ್ನಾ, ಆ. 1 (ಯುಎನ್ಐ)– ಮೇವು ಹಗರಣದ ಸಂಬಂಧ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರನ್ನು ಬಂಧಿಸಿರುವುದನ್ನು ಪ್ರತಿಭಟಿಸಿ ಇಂದು ಕರೆ ನೀಡಲಾಗಿದ್ದ ‘ಬಿಹಾರ ಬಂದ್‌’ ಹಿಂಸಾಚಾರದ ತಿರುವು ಪಡೆಯಿತು.

ಆಸ್ತಿ–ಪಾಸ್ತಿ ಹಾನಿ, ಗಾಯಗೊಂಡಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ನಾಗರಿಕರಿಗೆ ಕರೆ ನೀಡಿರುವ ಪಟ್ನಾ ಹೈಕೋರ್ಟ್, ರಾಜ್ಯದ ಉನ್ನತ ಅಧಿಕಾರಿಗಳಿಗೆ ಭದ್ರತೆ ಕುರಿತಾಗಿ ವರದಿ ಸಲ್ಲಿಸುವಂತೆ ಸಮನ್ಸ್ ನೀಡಿದೆ.

ADVERTISEMENT

ವೀರಪ್ಪನ್ ಷರತ್ತು: ವಿವರ ಸದನಕ್ಕೆ, ಮಂಗಳವಾರ ಚರ್ಚೆ

ಬೆಂಗಳೂರು, ಆ. 1– ರಾಜ್ಯ ಸರ್ಕಾರವು ತಮಿಳುನಾಡು ಸರ್ಕಾರದ ಮುಖಾಂತರ ನರಹಂತಕ ವೀರಪ್ಪನ್‌ನ ಷರತ್ತುಗಳ ಸಂಬಂಧದಲ್ಲಿ ನಡೆಸಿರುವ ಪತ್ರ ವ್ಯವಹಾರ ಹಾಗೂ ಕಳುಹಿಸಿರುವ ಸಂದೇಶಗಳು ಸೇರಿದಂತೆ ಇತರೆ ವಿವರಗಳನ್ನು ವಿರೋಧ ಪಕ್ಷಗಳ ಗಮನಕ್ಕೆ ತಂದಿಲ್ಲ ಎಂಬ ವಿರೋಧ ಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ಎಲ್ಲ ವಿವರಗಳನ್ನು ಮಂಗಳವಾರದಂದು ಸದನದ ಮುಂದಿಡುವುದಾಗಿ ಅರಣ್ಯ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಅವರು ಇಂದು ವಿಧಾನಸಭೆಯಲ್ಲಿ ಭರವಸೆ ನೀಡಿದರು.

ಇದೇ ವಿಷಯದಲ್ಲಿ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿದ್ದ ವಿರೋಧ ಪಕ್ಷಗಳು ಅದರ ಪೂರ್ವಭಾವಿಯಾಗಿ ಪ್ರಸ್ತಾವನೆ ಮಾಡಿ ಸರ್ಕಾರದ ಕ್ರಮಗಳ ಬಗ್ಗೆ ತರಾಟೆಗೆ ತೆಗೆದುಕೊಂಡಾಗ ಸಚಿವರು ಈ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.