ADVERTISEMENT

25 ವರ್ಷಗಳ ಹಿಂದೆ: ಸೋಮವಾರ 25.5.1998

ಪ್ರಜಾವಾಣಿ ವಿಶೇಷ
Published 25 ಮೇ 2023, 0:01 IST
Last Updated 25 ಮೇ 2023, 0:01 IST
ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ
ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ   

ಆರ್ಥಿಕ ದಿಗ್ಬಂಧನ: ಕಹಿ ಆಗಲಿರುವ ಬಜೆಟ್

ನವದೆಹಲಿ, ಮೇ 24 (ಪಿಟಿಐ)– ಭಾರತದ ವಿರುದ್ಧ ಕೆಲವು ದೇಶಗಳು ದಿಗ್ಬಂಧನ ವಿಧಿಸಿರುವುದರಿಂದ ಜೂನ್ 1ರಂದು ಮಂಡನೆಯಾಗುವ ಕೇಂದ್ರದ ಬಿಜೆಪಿ ಮೈತ್ರಿಕೂಟದ ಮೊದಲ ಬಜೆಟ್ ಭಾರಿ ಹೊರೆಯಾಗಿರುವ ಸಾಧ್ಯತೆ ಇದೆ.

ದಿಗ್ಬಂಧನದ ಪ್ರಮಾಣ ಸುಮಾರು 5 ಸಾವಿರ ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದ್ದು, ಈ ಹಣವನ್ನು ಬಜೆಟ್‌ನಲ್ಲಿ ಒದಗಿಸಬೇಕಾಗಿರುವುದರಿಂದ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಬಹುದು ಎಂಬ ಇಂಗಿತವನ್ನು ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ ಅವರು ವ್ಯಕ್ತಪಡಿಸಿದ್ದಾರೆ.

ADVERTISEMENT

ಸಂಪನ್ಮೂಲ ಸಂಗ್ರಹಣೆ ಕೊರತೆ, ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಬಜೆಟ್ ಇನ್ನಷ್ಟು ಕಹಿಯಾಗುವ ಸಾಧ್ಯತೆ ಇದೆ. ಭಾರತ ಐದು ಅಣ್ವಸ್ತ್ರ ಸಾಧನ ಪರೀಕ್ಷೆ ನಡೆಸಿದ್ದರಿಂದ ಅಮೆರಿಕ ಮತ್ತು ಜಪಾನ್ ಸೇರಿದಂತೆ ಹಲವಾರು ದೇಶಗಳು ಭಾರತದ ವಿರುದ್ಧ ದಿಗ್ಬಂಧನ ವಿಧಿಸಿವೆ. ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ ಬಜೆಟ್‌ಗೆ ಅಂತಿಮ ರೂಪ ನೀಡುವುದೇ ಕಷ್ಟವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.