ADVERTISEMENT

25 ವರ್ಷಗಳ ಹಿಂದೆ | ಆಲಮಟ್ಟಿ: ಪುನರ್ವಸತಿ ಸಮಸ್ಯೆ ಅಧ್ಯಯನಕ್ಕೆ ಸಮಿತಿ ರಚನೆ

ಸೋಮವಾರ, 15 ಮೇ 2000

​ಪ್ರಜಾವಾಣಿ ವಾರ್ತೆ
Published 14 ಮೇ 2025, 23:30 IST
Last Updated 14 ಮೇ 2025, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಆಲಮಟ್ಟಿ: ಪುನರ್ವಸತಿ ಸಮಸ್ಯೆ ಅಧ್ಯಯನಕ್ಕೆ ಸಮಿತಿ ರಚನೆ

ಹುಬ್ಬಳ್ಳಿ, ಮೇ 14– ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಅಣೆಕಟ್ಟು ನಿರ್ಮಾಣದ ಹಿನ್ನೆಲೆಯಲ್ಲಿ ನಿರ್ವಸತಿಗರಾಗುವ ಜನರ ಪುನರ್ವಸತಿ ಸೇರಿದಂತೆ ಬಗೆಹರಿಯದೇ ಉಳಿದಿರುವ ವಿಷಯಗಳ ಅಧ್ಯಯನಕ್ಕಾಗಿ ಸರ್ಕಾರವು ನಿವೃತ್ತ ಐಎಎಸ್‌ ಅಧಿಕಾರಿ ಎ.ಎ.ಶೆಟ್ಟಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿದೆ ಎಂದು ಭಾರಿ ಮತ್ತು ಮಧ್ಯಮ ನೀರಾವರಿ ಸಚಿವ ಎಚ್‌.ಕೆ.ಪಾಟೀಲ ಇಂದು ಇಲ್ಲಿ ಹೇಳಿದರು.

‘ಪ್ರಜಾವಾಣಿ’ ಜೊತೆಗೆ ಮಾತನಾಡುತ್ತಿದ್ದ ಅವರು, ಸಮಿತಿಯ ಇತರ ಸದಸ್ಯರಾಗಿ ಆರ್‌.ಬಿ.ಪಾಟೀಲ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಂ.ಮಹದೇವಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಸಮಿತಿಯನ್ನು ಮೇ 9ರಂದು ರಚಿಸಲಾಗಿದ್ದು, ವಿಸ್ತೃತ ವರದಿಯನ್ನು ಒಂದು ತಿಂಗಳ ಒಳಗಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ. ಅಣೆಕಟ್ಟು ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಶೇಖರಣೆ ಆಗುವುದರ ಪರಿಣಾಮವಾಗಿ ಉಂಟಾಗಬಹುದಾದ ಮಲೇರಿಯಾ ಸಮಸ್ಯೆಯೂ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಮಿತಿ ಅಧ್ಯಯನ ಮಾಡಲಿದೆ. 

ಫಲಿಮಾರು ಮಠದ ವಿದ್ಯಾಮಾನ್ಯ ಶ್ರೀಗಳ ನಿಧನ

ಉಡುಪಿ, ಮೇ 14– ಫಲಿಮಾರು ಭಂಡಾರಕೇರಿ ಮಠಾಧೀಶ ವಿದ್ಯಾಮಾನ್ಯ
ತೀರ್ಥ ಸ್ವಾಮೀಜಿ (87) ಅವರು ಇಂದು ರಾತ್ರಿ 7.45ರ ಸುಮಾರಿಗೆ ನಿಧನರಾದರು.

ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಶ್ರೀಕೃಷ್ಣ ಮಠದ ವಸಂತ ಮಹಲ್‌ನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.