175 ತಾಲ್ಲೂಕುಗಳಿಗೆ ಇಂಟರ್‌ನೆಟ್
ಬೆಂಗಳೂರು, ಮೇ 17– ರಾಜ್ಯದ ಎಲ್ಲ ಭಾಗಗಳಿಗೆ ಇಂಟರ್‌ನೆಟ್ ಸೇವೆಯನ್ನು ವಿಸ್ತರಿಸಲು ಕರ್ನಾಟಕ ದೂರಸಂಪರ್ಕ ವೃತ್ತವು 175 ತಾಲ್ಲೂಕು ಕೇಂದ್ರಗಳಲ್ಲಿ ಈ ವರ್ಷವೇ ‘ಸೈಬರ್ ಡಾಬ’ಗಳನ್ನು ಆರಂಭಿಸಲಿದೆ.
‘ಕಳೆದ ವರ್ಷ 3.60 ಲಕ್ಷ ದೂರವಾಣಿ ಸಂಪರ್ಕ ಕಲ್ಪಿಸುವ ಗುರಿಯನ್ನು ಸಾಧಿಸಲಾಗಿದೆ. ಈ ವರ್ಷ 4.20 ಲಕ್ಷ ದೂರವಾಣಿ ಸಂಪರ್ಕ ನೀಡುವ ಗುರಿ ಇಲಾಖೆ ಇರಿಸಿಕೊಂಡಿದೆ’ ಎಂದು ‘ವಿಶ್ವ ದೂರಸಂಪರ್ಕ ದಿನ’ದ ಅಂಗವಾಗಿ ಏರ್ಪಡಿಸಿದ್ದ ‘ಸಂಚಾರ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ದೂರಸಂಪರ್ಕ ವೃತ್ತದ ಪ್ರಧಾನ ವ್ಯವಸ್ಥಾಪಕ ಟಿ. ರಾಮಮೂರ್ತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.