ADVERTISEMENT

25 ವರ್ಷಗಳ ಹಿಂದೆ: ವಿದ್ಯುತ್‌ ಬಾಕಿ ತೀರಿಸಿದರೆ 330 ಕೋಟಿ ಬಡ್ಡಿ ಮನ್ನಾ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 0:30 IST
Last Updated 23 ಸೆಪ್ಟೆಂಬರ್ 2025, 0:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಬೆಂಗಳೂರು, ಸೆಪ್ಟೆಂಬರ್‌ 22– ರಾಜ್ಯ ವಿದ್ಯುತ್‌ ಪ್ರಸರಣ ನಿಗಮಕ್ಕೆ ರೈತರು, ಸರ್ಕಾರಿ–ಅರೆ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿಯವರು ಉಳಿಸಿಕೊಂಡಿರುವ ವಿದ್ಯುತ್‌ ಬಾಕಿಯನ್ನು ನವೆಂಬರ್‌ 30ರೊಳಗೆ ಪಾವತಿ ಮಾಡಿದರೆ ಒಟ್ಟು 330 ಕೋಟಿ ರೂಪಾಯಿ ಬಡ್ಡಿ ಮನ್ನಾ  ಮಾಡಲು ಸರ್ಕಾರ ನಿರ್ಧರಿಸಿದೆ.

ನಿಗಮದ ಕಾರ್ಯವೈಖರಿಯನ್ನು ಪ್ರತಿ ವಾರ ಪರಿಶೀಲಿಸಲು ರಚನೆಯಾಗಿರುವ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ನೇತೃತ್ವದ ಸಂಪುಟ ಉಪ ಸಮಿತಿಯ ಮೊದಲ ಸಭೆಯಲ್ಲಿ, ಇದೂ ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದು ಕೊಳ್ಳಲಾಗಿದೆ.

ಶತಾಬ್ದಿ: ಐಷಾರಾಮಿ ಸೌಲಭ್ಯ

ADVERTISEMENT

ಚೆನ್ನೈ, ಸೆಪ್ಟೆಂಬರ್ 22 (ಪಿಟಿಐ)– ಚೆನ್ನೈ–ಬೆಂಗಳೂರು–ಮೈಸೂರು ಮಧ್ಯೆ ಸಂಚರಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ‘ಎಕ್ಸಿಕ್ಯುಟೀವ್‌ ಚೇರ್‌ ಕಾರ್‌’ ಸೌಲಭ್ಯ ಅಳವಡಿಸಲಾಗುತ್ತಿದೆ. ಈ ಐಷಾರಾಮಿ ಸೌಲಭ್ಯವು ಅಕ್ಟೋಬರ್‌ 2ರಿಂದ ಜಾರಿಗೆ ಬರಲಿದೆ.

ಉದ್ಯಮಿಗಳಿಗಾಗಿ ಈ ಸೌಲಭ್ಯ ಅಳವಡಿಸಲಾಗುತ್ತಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.