
ಭೀಮಾ: ರಾಜ್ಯದಿಂದಲೇ ಬ್ಯಾರೇಜ್‌ಗೆ ಕೃಷ್ಣ ಸಲಹೆ
ಕಲ್ಬುರ್ಗಿ, ಫೆ. 13– ಬತ್ತಿರುವ ಭೀಮಾ ನದಿಗೆ ಮಹಾರಾಷ್ಟ್ರವಲ್ಲದೆ ರಾಜ್ಯದ ನಾರಾಯಣಪುರ ಅಣೆಕಟ್ಟೆಯಿಂದಲೂ ನೀರು ಬಿಡಿಸುವುದಾಗಿ ಇಂದು ಇಲ್ಲಿ ಹೇಳಿದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಮಹಾರಾಷ್ಟ್ರಕ್ಕೆ ತೊಂದರೆ ಕೊಡದಿರಲು ಕೆಲವು ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಿ ನಾವೇ ನೀರು ಪೂರೈಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಮಹಾರಾಷ್ಟ್ರ ಸರ್ಕಾರ ಭೀಮಾ ನದಿಗೆ ಬಿಡಲು ಒಪ್ಪಿರುವ ನೀರಿನ ಪ್ರಮಾಣ ಸಾಲದಿರುವುದರಿಂದ ನಾರಾಯಣಪುರ ಅಣೆಕಟ್ಟೆಯಿಂದ ನೀರು ಬಿಡಲಾಗುವುದೇ? ಎಂದು ವರದಿಗಾರರು ಕೇಳಿದಾಗ, ಅಲ್ಲಿಂದಲೂ ಬಿಡಿಸುವುದಾಗಿ ತಿಳಿಸಿದರು.
ಪ್ರತಿಕೂಲ ಪರಿಣಾಮ ಬೀರುವ ಹೊಸ ಕಂಪ್ಯೂಟರ್ ವೈರಸ್
ಬೆಂಗಳೂರು, ಫೆ. 13– ಹೋದ ವರ್ಷವಷ್ಟೆ ‘ಐ ಲವ್ ಯೂ’ ಎಂಬ ವೈರಸ್ ಆಕ್ರಮಣದಿಂದ ಕಂಗೆಟ್ಟಿದ್ದ ಕಂಪ್ಯೂಟರ್ ರಂಗ, ಈಗ ಇನ್ನೊಂದು ಹೊಸ ವೈರಸ್‌ಗೆ ತುತ್ತಾಗಿದೆ.
‘ವಿಬಿಎಸ್/ ಎಸ್‌ಎಸ್‌ಟಿ’ ಎಂಬ ವೈರಸ್ ದಾಳಿ ಇಟ್ಟಿದ್ದು, ಇದು ಸೋಮವಾರ ಅಮೆರಿಕದಲ್ಲಿ ಪತ್ತೆ ಆಗುವ ಮೂಲಕ ಕಂಪ್ಯೂಟರ್ ತಜ್ಞರ ನಿದ್ರೆ ಕೆಡಿಸಿದೆ.
ಟೆನಿಸ್ ತಾರೆ ಅನ್ನಾ ಕುರ್ನಿಕೋವಾ ಅವರ ಚಿತ್ರವನ್ನು ತೆರೆದು ತೋರಿಸುವ ಆಮಿಷ ಒಡ್ಡುವ ಈ ಹೊಸ ವೈರಸ್‌ನಿಂದ ‘ಇ–ಮೇಲ್’ ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂಬ ಭಯ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.