ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, ಸೆಪ್ಟೆಂಬರ್‌ 24, 1996

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 20:31 IST
Last Updated 23 ಸೆಪ್ಟೆಂಬರ್ 2021, 20:31 IST
   

ಸೀತಾರಾಂ ಕೇಸರಿ ಕಾಂಗ್ರೆಸ್‌ ಅಧ್ಯಕ್ಷ
ನವದೆಹಲಿ, ಸೆ. 23 (ಪಿಟಿಐ, ಯುಎನ್‌ಐ)–
ಕಾಂಗ್ರೆಸ್‌ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಹಿರಿಯ ನಾಯಕ ಹಾಗೂ ಪಕ್ಷದ ಖಜಾಂಚಿ ಸೀತಾರಾಂ ಕೇಸರಿ ಅವರು ಇಂದು ರಾತ್ರಿ ಆಯ್ಕೆಯಾಗಿದ್ದಾರೆ.

ಶನಿವಾರ ರಾಜೀನಾಮೆ ನೀಡಿದ ನರಸಿಂಹ ರಾವ್‌ ಅವರ ಉತ್ತರಾಧಿಕಾರಿಯಾಗಿ ಸೀತಾರಾಂ ಕೇಸರಿ ಅವರನ್ನು ಸತತ ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಈ ಹಿರಿಯ ಗಾಂಧಿವಾದಿಯ ಆಯ್ಕೆಗೆ ರಾಜೇಶ್‌ ಪೈಲಟ್‌ ಅವರು ಮಾತ್ರ ಒಂಟಿ ದನಿಯ ವಿರೋಧ ವ್ಯಕ್ತಪಡಿಸಿದರು.

‘ನನ್ನ ಹೆಸರನ್ನು ಪಿ.ವಿ. ನರಸಿಂಹ ರಾವ್‌ ಅವರು ಮಂಡಿಸಿದ್ದು, ಪಕ್ಷದ ಬಲವರ್ಧನೆಗೆ ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವೆ’ ಎಂದು ತಮ್ಮ ಆಯ್ಕೆಯ ನಂತರ, ಸಂತಸದಿಂದ ಬೀಗುತ್ತಿದ್ದ ಕೇಸರಿ ತಿಳಿಸಿದರು.

ADVERTISEMENT

ಅನಿವಾಸಿ ಭಾರತೀಯ ಲಕ್ಕೂಭಾಯಿ ಪಾಠಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಸಹ ಆರೋಪಿಯನ್ನಾಗಿ ಮಾಡಬಾರದು ಎಂದು ಮಾಜಿ ಪ್ರಧಾನಿ ಹಾಗೂ ಪಕ್ಷದ ಅಧ್ಯಕ್ಷ ಪಿ.ವಿ.ನರಸಿಂಹ ರಾವ್‌ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಧೀಶ ಅಜಿತ್‌ ಭಾರಿಹೋಕ್‌ ಅವರು ಶನಿವಾರ ತಳ್ಳಿಹಾಕಿದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾವ್ ರಾಜೀನಾಮೆ ಸಲ್ಲಿಸಿದ್ದರಿಂದ ಈ ಸ್ಥಾನ ತೆರವಾಗಿತ್ತು.

ಚಿತ್ರನಟಿ ಸಿಲ್ಕ್‌ಸ್ಮಿತಾ ಆತ್ಮಹತ್ಯೆ
ಚೆನ್ನೈ, ಸೆ. 23 (ಪಿಟಿಐ)–
ಪಂಚಭಾಷಾ ಚಿತ್ರತಾರೆ ಸಿಲ್ಕ್‌ ಸ್ಮಿತಾ (35) ಇಲ್ಲಿನಕೋಡಂಬಾಕಂನಲ್ಲಿರುವ ತಮ್ಮ ಮನೆಯಲ್ಲಿ ಇಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.