ADVERTISEMENT

25 ವರ್ಷ ಹಿಂದೆ| ಬುಧವಾರ, 17–05–1995

​ಪ್ರಜಾವಾಣಿ ವಾರ್ತೆ
Published 16 ಮೇ 2020, 15:15 IST
Last Updated 16 ಮೇ 2020, 15:15 IST

ನವದೆಹಲಿ, ಮೇ 16 (ಯುಎನ್‌ಐ, ಪಿಟಿಐ): ಈ ತಿಂಗಳ 23ಕ್ಕೆ ಅಂತ್ಯಗೊಳ್ಳಲಿರುವ ವಿವಾದಾತ್ಮಕ ಟಾಡಾ(ಭಯೋತ್ಪಾದನೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆ ತಡೆ) ಕಾಯ್ದೆ ಅವಧಿಯನ್ನು ಮತ್ತೆ ವಿಸ್ತರಿಸದಿರಲು ಕೇಂದ್ರ ಸಚಿವ ಸಂಪುಟ ಇಂದು ನಿರ್ಧರಿಸಿತು. ಇದರಿಂದಾಗಿ ಟಾಡಾ ತಾನಾಗಿಯೇ ರದ್ದಾಗಲಿದೆ.

1985ರಲ್ಲಿ ರಾಜೀವ್‌ ಗಾಂಧಿ ಸರ್ಕಾರ ಪಂಜಾಬ್‌ನಲ್ಲಿನ ಭಯೋತ್ಪಾದನೆ ಹತ್ತಿಕ್ಕುವ ಉದ್ದೇಶದೊಡನೆ ಮೊಟ್ಟ ಮೊದಲು ಟಾಡಾ ಕಾಯ್ದೆ ಜಾರಿಗೆ ತಂದಿತ್ತು. ನಂತರ ಹಲವು ಸಲ ತಿದ್ದುಪಡಿ ತಂದು ಇದನ್ನು ಪದೇ ಪದೇ ವಿಸ್ತರಿಸುತ್ತ ಬರಲಾಯಿತು. ಈಗ ಇದರ ಅವಧಿ ಮೇ 23ಕ್ಕೆ ಕೊನೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT