ADVERTISEMENT

25 ವರ್ಷಗಳ ಹಿಂದೆ | ಶುಕ್ರವಾರ, 2–6–1995

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 19:45 IST
Last Updated 1 ಜೂನ್ 2020, 19:45 IST

ಪರಿಶಿಷ್ಟರಿಗೆ ಬಡ್ತಿಯಲ್ಲೂ ಮೀಸಲು ಸಂವಿಧಾನ ತಿದ್ದುಪಡಿಗೆ ವಿಧೇಯಕ
ನವದೆಹಲಿ, ಜೂನ್‌ 1 (ಪಿಟಿಐ)–
ಸರ್ಕಾರಿ ಸೇವೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಿಬ್ಬಂದಿಗೆ ಬಡ್ತಿಯಲ್ಲೂ ಮೀಸಲು ಸೌಲಭ್ಯ ಮುಂದುವರಿಸುವ ಸಂವಿಧಾನದ 86ನೇ ತಿದ್ದುಪಡಿ ಮಸೂದೆಯನ್ನು ಸಂಬಂಧಿತ ಖಾತೆಯ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸದೇ ಒಪ್ಪಿಗೆ ನೀಡಬೇಕು ಎಂಬ ಸರ್ಕಾರದ ಕೋರಿಕೆಗೆ ಲೋಕಸಭೆ ಇಂದು ಸಮ್ಮತಿಸಿತು.

ಪರಿಶಿಷ್ಟರಿಗೆ ಉದ್ಯೋಗದಲ್ಲಿ ಮೀಸಲಾತಿ ಮೊದಲ ನೇಮಕಕ್ಕೆ ಮಾತ್ರ ಲಭ್ಯ, ಬಡ್ತಿಗೆ ಅಲ್ಲ ಎಂದು ಕಳೆದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ನಿರರ್ಥಕಗೊಳಿಸುವುದು ಈ ವಿಧೇಯಕದ ಉದ್ದೇಶ.

ಲೈವ್‌ಬ್ಯಾಂಡ್‌ಗೆ ಮತ್ತೆ ಅನುಮತಿ
ಬೆಂಗಳೂರು, ಜೂನ್‌ 1–
ಬಾರ್‌, ರೆಸ್ಟೊರೆಂಟ್‌ಗಳಲ್ಲಿ ಪುನಃ ಲಘು ಸಂಗೀತ (ಲೈವ್‌ಬ್ಯಾಂಡ್‌) ನಡೆಸಲು ಅನುಮತಿ ಕೊಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ.

ADVERTISEMENT

ಲೈವ್‌ಬ್ಯಾಂಡ್‌ಗೆ ಅನುಮತಿ ನೀಡುವ ವಿಚಾರದಲ್ಲಿ ಸರ್ಕಾರದಲ್ಲೇ ಗೊಂದಲವಿದೆಯಲ್ಲಾ ಎಂಬ ಪ್ರಶ್ನೆಗೆ, ‘ಯಾವುದೇ ಗೊಂದಲವಿಲ್ಲ. ಆದರೆ ಕ್ಯಾಬರೆ ನಡೆಸಲು ನಾವು ಅವಕಾಶ ಕೊಡುವುದಿಲ್ಲ. ಲಘು ಸಂಗೀತ ನಡೆಸುವ ಹೋಟೆಲ್‌ಗಳು ರಾತ್ರಿ 11 ಗಂಟೆ ನಂತರ ಮುಚ್ಚಲೇಬೇಕು’ ಎಂದು ಮುಖ್ಯಮಂತ್ರಿ ಎಚ್‌ ಡಿ. ದೇವೇಗೌಡ ಅವರು ಇಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.