ADVERTISEMENT

ಶನಿವಾರ, 16–4–1994

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 18:58 IST
Last Updated 15 ಏಪ್ರಿಲ್ 2019, 18:58 IST

ಗ್ಯಾಟ್ ಒಪ್ಪಂದಕ್ಕೆ ಭಾರತ ಸೇರಿ 125 ರಾಷ್ಟ್ರಗಳ ಸಹಿ

ಮರಕೇಶ್, ಏ. 15 (ಪಿಟಿಐ)– ವಿಶ್ವ ವ್ಯಾಪಾರ ಕ್ಷೇತ್ರದ ಹೊಸ ಯುಗವನ್ನು ಆರಂಭಿಸಲಿರುವ, ಆಮದು ತೆರಿಗೆಯನ್ನು ಶೇಕಡ 40ರಷ್ಟು ಕಡಿಮೆ ಮಾಡಲಿರುವ ಚಾರಿತ್ರಿಕ ಗ್ಯಾಟ್ ಒಪ್ಪಂದಕ್ಕೆ ಭಾರತವೂ ಸೇರಿದಂತೆ 125 ರಾಷ್ಟ್ರಗಳು ಇಂದು ಇಲ್ಲಿ ಸಹಿ ಹಾಕಿದವು.

ಗ್ಯಾಟ್ ಒಪ್ಪಂದದ ಸುಪ್ರಧಾನ ನಿಯಮಗಳನ್ನೊಳಗೊಂಡ 500 ಪುಟಗಳ ಆರು ಪ್ರಮುಖ ದಾಖಲೆಗಳು ಹಾಗೂ ಪ್ರತಿಯೊಂದು ದೇಶವು ನೀಡುವ ಕರವಿನಾಯಿತಿ ಇತ್ಯಾದಿ ಅಂಶಗಳನ್ನೊಳಗೊಂಡ 20,000 ಪುಟಗಳ ವಿಸ್ತೃತ ಕರಡು ಇಂದು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಗೆ ಅಧಿಕೃತ ಮಾನದಂಡವಾಗಿ ಮಾರ್ಪಟ್ಟಿತು.

ADVERTISEMENT

ಫ್ರೆಂಚ್ ನೆರವಿನ 2 ವಿದ್ಯುತ್ ಸ್ಥಾವರ

ತುಮಕೂರು, ಏ. 15– ಫ್ರೆಂಚ್ ದೇಶದ ನೆರವಿನಿಂದ ರಾಜ್ಯದಲ್ಲಿ 115 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಡೀಸಲ್ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ಸ್ಥಾಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದರು.

ತುಮಕೂರು ಅಂತರಸನಹಳ್ಳಿ ಕೈಗಾರಿಕಾ ವಸಾಹತುವಿನಲ್ಲಿ ನೂತನವಾಗಿ ನಿರ್ಮಿಸಿರುವ 220:66 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದ ಮೊದಲನೇ ಹಂತದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಂಬಂಧ ಆ ದೇಶದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.