ADVERTISEMENT

ಬುಧವಾರ, 2–11–1994

ಬುಧವಾರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 19:43 IST
Last Updated 1 ನವೆಂಬರ್ 2019, 19:43 IST

ಡಾ. ರಾಜ್‌ರಿಂದ ಕಲ್ಯಾಣ್‌ಗೆ ‘ಉಂಗುರ’ ಗೌರವ

ಬೆಂಗಳೂರು, ನ. 1– ‘ಸ್ವರ್ಣ ಪದಕಗಳನ್ನು ಪಡೆದಿರುವ ಕನ್ನಡ ಚಲನಚಿತ್ರಗಳು ಆಸ್ಕರ್ ಪ್ರಶಸ್ತಿ ಗಳಿಸಬೇಕು ಎಂಬುದೇ ನನ್ನ ಆಸೆಯಾಗಿದೆ’ ಎಂದು ಹಿರಿಯ ನಟ ಹಾಗೂ ನಿರ್ದೇಶಕರಾದ ನಟರತ್ನ ಕಲ್ಯಾಣ್‌ಕುಮಾರ್ ಇಂದು ಇಲ್ಲಿ ಹೇಳಿದರು.

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ರಾಜ್ಯೋತ್ಸವದ ಅಂಗವಾಗಿ ತಮಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜಿ.ವಿ. ಅಯ್ಯರ್ ಸೇರಿದಂತೆ ಹಲವು ಶ್ರೇಷ್ಠ ನಿರ್ದೇಶಕರು ಉತ್ತಮ ಚಿತ್ರಗಳನ್ನು ಕನ್ನಡಿಗರಿಗೆ ನೀಡಿ
ದ್ದಾರೆ. ಅವರ ಸೇವೆ ಸದಾಕಾಲ ಸ್ಮರಣೀಯ ಹಾಗೂ ಶ್ಲಾಘನೀಯ’ ಎಂದು ಬಣ್ಣಿಸಿದರು. ಸಂಘದ ಅಧ್ಯಕ್ಷರಾದ ಡಾ. ರಾಜ್‌ಕುಮಾರ್ ಅವರು ಕಲ್ಯಾಣ್‌ಕುಮಾರ್‌ ಅವರಿಗೆ ‘ಉಂಗುರ’ ತೊಡಿಸಿದರು.

ADVERTISEMENT

ಬಸವನಗುಡಿಯಿಂದ ಸ್ಪರ್ಧೆಗೆ ಅನಂತ್ ನಕಾರ

ಬೆಂಗಳೂರು, ನ. 1– ‘ಮಲ್ಲೇಶ್ವರ–ಬಸವನಗುಡಿ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ ಅಂದರೆ ಎರಡೂ ಕಡೆಯಿಂದ ಸ್ಪರ್ಧೆಗಿಳಿಯುತ್ತೇನೆ. ಮಲ್ಲೇಶ್ವರ ಬೇಡ ಬಸವನಗುಡಿಯಿಂದಲೇ ಸ್ಪರ್ಧಿಸಿ ಎಂದು ನನ್ನನ್ನು ಬಲಿಪಶು ಮಾಡುವುದಾದರೆ ಎರಡೂ ಕ್ಷೇತ್ರಗಳಿಂದಲೂ ನಾಮಪತ್ರ ಹಿಂತೆಗೆದುಕೊಳ್ಳುತ್ತೇನೆ. ಒಟ್ಟಾರೆ ಇದರ ಹಿಂದೆ ಯಾರದೋ ಕೈವಾಡವಿದೆ. ಸಂಚು ನಡೆದಿದೆ’ ಎಂದು ಚಿತ್ರನಟ ಅನಂತ್‌ನಾಗ್ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.