ADVERTISEMENT

ಶನಿವಾರ, 26–11–1994

1994

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:19 IST
Last Updated 25 ನವೆಂಬರ್ 2019, 19:19 IST

115 ಎಂ.ಎಲ್‌.ಎ.ಗಳ ಆಯ್ಕೆ ಇಂದು

‌ಬೆಂಗಳೂರು, ನ. 25– ಅಬ್ಬರ, ಆರ್ಭಟಗಳ ಅಲೆಯಿಲ್ಲದೆ ರಾಜ್ಯದ ಹತ್ತನೇ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಪ್ರಥಮ ಹಂತವಾಗಿ ಹತ್ತು ಜಿಲ್ಲೆಗಳ ನೂರ ಹದಿನೈದು ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ. ಸುಮಾರು ಒಂದೂವರೆ ಕೋಟಿ ಮತದಾರರು 1,188 ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.

‌ಅಂಬರೀಷ್ ಸಭೆಯಲ್ಲಿ ಗದ್ದಲ

ADVERTISEMENT

ಬೆಂಗಳೂರು, ನ. 25–ಚಲನಚಿತ್ರ ನಟ ಅಂಬರೀಷ್ ರಾಜಕೀಯ ಪ್ರವೇಶ ಮತ್ತು ಕಾಂಗೈ ಸೇರ್ಪಡೆ ಪ್ರತಿಭಟಿಸಿ ಅವರು ಭಾಗವಹಿಸಿದ್ದ ಸಭೆಯಲ್ಲಿ ಚಪ್ಪಲಿ, ಕಲ್ಲು ತೂರಿ, ಧಿಕ್ಕಾರದ ಘೋಷಣೆಗಳನ್ನು ಕೂಗಿದ ಘಟನೆ ಚನ್ನಪಟ್ಟಣದಲ್ಲಿ ಇಂದು ನಡೆಯಿತು.

ಉಪ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಸಂಸತ್ ಸದಸ್ಯ ಜಿ. ಮಾದೇಗೌಡ ಅವರ ಜತೆ ಅಂಬರೀಷ್ ಕಾಂಗ್ರೆಸ್ ಪರ ಪ್ರಚಾರ ಮಾಡಲು ಚನ್ನಪಟ್ಟಣ ಬಸ್ ನಿಲ್ದಾಣದ ಬಳಿಯ ಮೈದಾನದಲ್ಲಿ ನಿರ್ಮಿಸಿದ ವೇದಿ ಕೆಗೆ ಬಂದು ಮಾತನಾಡಲು ಆರಂಭಿಸಿ ದಾಗ ‘ರಾಜಕೀಯಕ್ಕೆ ಯಾಕೆ ಬಂದಿರಿ, ಅಭಿಮಾನಿಗಳನ್ನು ಕಡೆಗಣಿಸಿದ್ದೇಕೆ’? ಎಂದು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಪ್ರಶ್ನಿಸಿದರು. ‘ರಾಜ್ಯ ಹಾಗೂ ಜನತೆಯ ಒಳಿತಿಗಾಗಿ ರಾಜಕೀಯ ಪ್ರವೇಶಿಸಿ ದ್ದೇನೆ’ ಎಂದು ಅಂಬರೀಷ್ ಹೇಳಿದರು.

ನಕಲಿ ಅಂಕಪಟ್ಟಿ: ಪ್ರವೇಶ ರದ್ದು

‌ಬೆಂಗಳೂರು, ನ. 25– ನಕಲಿ ಅಂಕಪಟ್ಟಿಗಳನ್ನು ಹಾಜರುಪಡಿಸಿ ಕೃಷಿ ವಿಶ್ವ ವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಕಲಿಯುತ್ತಿದ್ದ 52 ವಿದ್ಯಾರ್ಥಿಗಳ ಪ್ರವೇಶ ವನ್ನು ರದ್ದುಗೊಳಿಸಿ ವಿಶ್ವವಿದ್ಯಾಲಯ ಸೋಮವಾರ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.