ADVERTISEMENT

ಶನಿವಾರ, 24–12–1994

ಶನಿವಾರ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 20:30 IST
Last Updated 23 ಡಿಸೆಂಬರ್ 2019, 20:30 IST

ರಾವ್ ರಾಜೀನಾಮೆಗೆ ಬಿಡದ ಪಟ್ಟು: ಉಭಯ ಸದನದಲ್ಲಿ ಕೋಲಾಹಲ

ನವದೆಹಲಿ, ಡಿ. 23 (ಪಿಟಿಐ)– ನರಸಿಂಹ ರಾವ್ ನೇತೃತ್ವದ ಸರ್ಕಾರ ಷೇರು ಹಾಗೂ ಸಕ್ಕರೆ ಹಗರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷಗಳ ಸದಸ್ಯರು ಪಟ್ಟು ಹಿಡಿದಿದ್ದರಿಂದ ಸಂಸತ್ತಿನ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಇಂದೂ ಉಭಯ ಸದನಗಳಲ್ಲಿ ಯಾವುದೇ ಕಾರ್ಯಕಲಾಪ ನಡೆಯದೆ ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.

ಕೊಗ್ಗ ಕಾಮತ್‌ರಿಗೆ ‘ತುಳಸಿ ಸಮ್ಮಾನ್’

ADVERTISEMENT

ಭೋಪಾಲ್, ಡಿ. 23– ಕರ್ನಾಟಕದ ಹೆಸರಾಂತ ಗೊಂಬೆಯಾಟ ಕಲಾವಿದ ಕೊಗ್ಗ ದೇವಣ್ಣ ಕಾಮತ್ ಅವರಿಗೆ ಈ ಸಾಲಿನ ಪ್ರತಿಷ್ಠಿತ ‘ತುಳಸಿ ಸಮ್ಮಾನ್’ ಪ್ರಶಸ್ತಿ ನೀಡಲಾಗಿದೆ. ಸಾಂಪ್ರದಾಯಿಕ ಕಲಾ ಪ್ರಕಾರದ ಉತ್ತೇಜನಕ್ಕಾಗಿ ಮಧ್ಯಪ್ರದೇಶ ಸರ್ಕಾರ ಸ್ಥಾಪಿಸಿರುವ ಈ ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಂಸಾ ಫಲಕ ಒಳಗೊಂಡಿದೆ.

ಎಚ್.ಎಲ್. ನಾಗೇಗೌಡ ಮುಧೋಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ

ಬೆಂಗಳೂರು, ಡಿ. 23– ರನ್ನನ ಜನ್ಮಸ್ಥಳವಾದ ವಿಜಾಪುರ ಜಿಲ್ಲೆಯ ಮುಧೋಳದಲ್ಲಿ ನಡೆಯಲಿರುವ ಅಖಿಲ ಭಾರತ 64ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಜಾನಪದ ವಿದ್ವಾಂಸ ಎಚ್.ಎಲ್. ನಾಗೇಗೌಡ ಅವರು ಆಯ್ಕೆಯಾಗಿದ್ದಾರೆ ಎಂದು ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.