ADVERTISEMENT

25 ವರ್ಷಗಳ ಹಿಂದೆ: ಭಾರತದ ಡಯಾನಾ ‘ವಿಶ್ವಸುಂದರಿ’

ಭಾನುವಾರ, 23–11–1997

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 19:29 IST
Last Updated 22 ನವೆಂಬರ್ 2022, 19:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಭಾರತದ ಡಯಾನಾ ‘ವಿಶ್ವಸುಂದರಿ’

ಮಾಹೆ (ಸೀಷೆಲ್ಸ್‌), ನ. 22– ಸೀಷೆಲ್ಸ್‌ ದ್ವೀಪದಲ್ಲಿ ಇಂದು ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತದ 24 ವರ್ಷದ ‘ಫೆಮಿನಾ ಮಿಸ್‌ ಇಂಡಿಯಾ’ ಡಯಾನಾ ಹೇಡನ್‌ ಅವರಿಗೆ ‘ವಿಶ್ವಸುಂದರಿ’ ಪಟ್ಟ ದೊರೆತಿದೆ.

ಮೊದಲ ರನ್ನರ್‌ಅಪ್‌ ಆಗಿ ‘ಮಿಸ್‌ ನ್ಯೂಜಿಲೆಂಡ್‌’ ಹಾಗೂ 2ನೇ ರನ್ನರ್‌ಅಪ್‌ ಆಗಿ ‘ಮಿಸ್‌ ದಕ್ಷಿಣ ಆಫ್ರಿಕಾ’ ಆಯ್ಕೆಯಾದರು. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ವಿವಾದಾತ್ಮಕ ವಿಶ್ವಸುಂದರಿ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಗ್ರೀಸ್‌ ಸುಂದರಿ ಅವರು ಡಯಾನಾ ಹೇಡನ್‌ ಅವರಿಗೆ ಕಿರೀಟ ಧಾರಣೆ ಮಾಡಿದರು. ಈ ಮೊದಲು ನಡೆದ ‘ಮಿಸ್‌ ಫೋಟೊಜೆನಿಕ್‌’ ಹಾಗೂ ‘ಮಿಸ್‌ ಪರ್ಸನಾಲಿಟಿ’ ಸ್ಪರ್ಧೆಗಳಲ್ಲೂ ಪ್ರಥಮ ಸ್ಥಾನ ಗಳಿಸಿದರು.

ADVERTISEMENT

1966ರಲ್ಲಿ ರೀಟಾ ಫರಿಯಾ, 1995ರಲ್ಲಿ ಐಶ್ವರ್ಯಾ ರೈ ಅವರು ಈ ಮೊದಲು ಭಾರತಕ್ಕೆ ಈ ಪ್ರತಿಷ್ಠಿತ ‘ವಿಶ್ವಸುಂದರಿ’ ಗೌರವ ತಂದಿದ್ದವರು. ಸೀಷೆಲ್ಸ್‌ನಲ್ಲಿ ನಡೆದ ಪ್ರಸಕ್ತ ಸ್ಪರ್ಧೆಯಲ್ಲಿ 86 ದೇಶಗಳ ಸುಂದರಿಯರು ಸ್ಪರ್ಧಿಸಿದ್ದರು.

ವೀರಪ್ಪನ್ ಜತೆ ನಕ್ಕೀರನ್‌ ಗೋಪಾಲನ್‌ ದಿಢೀರ್‌ ಭೇಟಿ

ಚೆನ್ನೈ, ನ. 22 (ಯುಎನ್‌ಐ)– ನಕ್ಕೀರನ್‌ ಪತ್ರಿಕೆ ಸಂಪಾದಕ ಆರ್‌.ಆರ್‌. ಗೋಪಾಲನ್‌ ಅವರು ಕಾಡುಗಳ್ಳ ವೀರಪ್ಪನ್‌ನನ್ನು ಇಂದು ಕಾಡಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು ಎಂದು ನಕ್ಕೀರನ್‌ ಪತ್ರಿಕೆ ಮೂಲಗಳು ತಿಳಿಸಿವೆ.

ಶರಣಾಗತಿ ಬಗ್ಗೆ ಚರ್ಚೆ ಮಾಡಲು ಕಾಡಿನಲ್ಲಿ ತನ್ನ ಸ್ಥಾವರಕ್ಕೆ ಬಂದು ಭೇಟಿ ಮಾಡುವಂತೆ ವೀರಪ್ಪನ್‌ ಕಳೆದ ವಾರ ಗೋಪಾಲನ್‌ ಅವರಿಗೆ ಕ್ಯಾಸೆಟ್‌ವೊಂದನ್ನು ಕಳಿಸಿಕೊಟ್ಟಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.