ಸೇತುವೆಯಿಂದ ಬಸ್ಸು ಉರುಳಿ 14 ಬಿಐಟಿ ವಿದ್ಯಾರ್ಥಿಗಳ ಸಾವು
ತುಮಕೂರು: ಏ.11– ತುಮಕೂರಿಗೆ ಸಮೀಪದ ದೇವರ ಹೊಸಹಳ್ಳಿ ಸೇತುವೆ ಬಳಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 14 ಮಂದಿ ಸತ್ತಿದ್ದಾರೆ. ಪ್ರವಾಸದಿಂದ ಹಿಂತಿರುಗುತ್ತಿದ್ದ ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ಸೊಂದು ಸೇತುವೆ ಮೇಲಿಂದ ಕೆಳಗಿನ ರೈಲು ಹಳಿಗಳ ಮೇಲೆ ಮೂರು ಉರುಳು ಉರುಳಿ ಸ್ಥಳದಲ್ಲೇ ಆರು ಮಂದಿ ಮರಣ ಹೊಂದಿದರು. ಉಳಿದವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.