ADVERTISEMENT

25 ವರ್ಷದ ಹಿಂದೆ: ಕೊಯ್ದು ಮಾರುವ ಹಣ್ಣಿನಲ್ಲಿ ಸೋಂಕಿನ ಅಪಾಯ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
   

ಕೊಯ್ದು ಮಾರುವ ಹಣ್ಣಿನಲ್ಲಿ ಸೋಂಕಿನ ಅಪಾಯ

ಬೆಂಗಳೂರು, ಏ. 8– ಏಪ್ರಿಲ್‌ ಬಂದಿದೆ; ತನ್ನೊಂದಿಗೆ ಎಂದಿನಂತೆ ಉರಿ ಬಿಸಿಲನ್ನು ಹೊತ್ತು ತಂದಿದೆ. ಜೊತೆಯಲ್ಲಿ ಹಲವು ಬಗೆಯ ಸಾಂಕ್ರಾಮಿಕ ರೋಗಗಳು ಕಾಣಿಸಿವೆ. ರೋಗ ಹರಡಲು ಕಾರಣವಾದ ಬೀದಿ ಬದಿಯ ಹಣ್ಣು ಮಾರಾಟವನ್ನು ನಿಯಂತ್ರಿಸಲಾಗಿದೆ ಎಂದು ಮಹಾನಗರ ಪಾಲಿಕೆ ಹೇಳಿದರೂ, ಮಾರಾಟ ಮಾತ್ರ ವ್ಯಾಪಕವಾಗಿ ನಡೆಯುತ್ತಿದೆ.

ಈ ವರ್ಷ ಬೇಸಿಗೆ ಬಿಸಿಲಿನ ಬೇಗೆ ಹೇಳಲಾಗದು. ಬೇಸಿಗೆ ಆರಂಭದ ದಿನಗಳಲ್ಲೇ ಈ ರೀತಿ ತಾಳಲಾರದಷ್ಟು ಬಿಸಿಲು ಬಿದ್ದರೆ ನಂತರದ ದಿನಗಳಲ್ಲಿ ಏನು ಮಾಡುವುದು ಎಂದು ನಾಗರಿಕರು ಪ್ರಶ್ನಿಸುತ್ತಾರೆ; ಇದಕ್ಕೆ ಪ್ರಕೃತಿಯ ಮೇಲೆ ಸವಾರಿ ಮಾಡಲು ಹೊರಟಿರುವ ಜನರೇ ಕಾರಣ ಎಂದು ದೂಷಿಸುತ್ತಾರೆ.

ADVERTISEMENT

ಜಮೀನು ವಿವಾದ ಇತ್ಯರ್ಥಕ್ಕೆ ಖಾಸಗಿ ಮೋಜಣಿದಾರರ ನೆರವು

ಬೆಂಗಳೂರು, ಏ. 8– ಹದ್ದುಬಸ್ತು ತಕರಾರುಗಳಿಂದಾಗಿ ರಾಜ್ಯದಾದ್ಯಂತ ಬಹುದಿನಗಳಿಂದ ನನೆಗುದಿಯಲ್ಲಿರುವ ಸುಮಾರು ಮೂರು ಲಕ್ಷ ಭೂವಿವಾದಗಳನ್ನು (ಪೋಡಿ ಪ್ರಕರಣ) ಮುಂದಿನ ಮೂರು–ನಾಲ್ಕು ತಿಂಗಳೊಳಗೆ ಬಗೆಹರಿಸಲು ಸರ್ಕಾರ ಉದ್ದೇಶಿಸಿದ್ದು, ಇದಕ್ಕಾಗಿ ಪರವಾನಗಿ ಪಡೆದ ಖಾಸಗಿ ಭೂಮಾಪಕರ ನೆರವು ಪಡೆಯಲಿದೆ.

ಈ ವಿಷಯವನ್ನು ಕಂದಾಯ ಸಚಿವ ಬಿ.ಸೋಮಶೇಖರ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.