ಲಡಾಖ್ ಜೂನ್ 7 (ಪಿಟಿಐ): ಭಾರತ ತನ್ನ ಗೆಳೆತನದ ಹಸ್ತವನ್ನು ಪಾಕಿಸ್ತಾನಕ್ಕೆ ಯಾವಾಗಲೂ ಚಾಚಿಯೇ ಇರುತ್ತದೆ ಎಂದು ಇಂದು ಇಲ್ಲಿ ಹೇಳಿದ ಪ್ರಧಾನಿ ವಾಜಪೇಯಿ, ಆ ದೇಶದ ಜತೆಗೆ ಶಾಶ್ವತ ಶಾಂತಿ ಮತ್ತು ಗೆಳೆತನ ಸ್ಥಾಪಿಸಲು ಸರಿಯಾದ ಸಮಯಕ್ಕಾಗಿ ಕಾಯಲು ಬಯಸುವುದಾಗಿ ಹೇಳಿದರು.
ಸಿಂಧೂ ನದಿಯ ಮೂಲಕ, ಭಾರತ ಸದಾ ಬದ್ಧವಾಗಿರುವ ಸ್ನೇಹ ಸಂಬಂಧದ ಸಂದೇಶವನ್ನು ಕಳುಹಿಸಿ ಕೊಡುತ್ತಿದ್ದೇವೆ. ಈ ನಿರೀಕ್ಷೆ ಇಂದಲ್ಲ ನಾಳೆ ನಿಜವಾಗಿ ಈ ಪ್ರದೇಶದಲ್ಲಿ ಶಾಂತಿ ನೆಲೆಸಬಹುದೆಂಬ ಆಶಯ ನಮ್ಮದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.