ADVERTISEMENT

25 ವರ್ಷಗಳ ಹಿಂದೆ: ಭಾನುವಾರ, 10–3–1996

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 19:31 IST
Last Updated 9 ಮಾರ್ಚ್ 2021, 19:31 IST
   

ಕ‍ಪ್ಪುಹಣದ ಚುನಾವಣೆ: ಆತಂಕ
ಕೊಚ್ಚಿ, ಮಾರ್ಚ್ 9 (ಯುಎನ್‌ಐ)–
‘ರಾಜಕೀಯ ಪಕ್ಷಗಳು ಯಾವತ್ತೂ ಪಕ್ಷಕ್ಕೆ ನಿಧಿಗಳನ್ನು ಕಳ್ಳಹಣದಲ್ಲೇ ಪಡೆಯುತ್ತವೆ. ಚುನಾವಣೆಗಳನ್ನು ಕಪ್ಪುಹಣದ ಮೂಲಕವೇ ಎದುರಿಸಲಾಗುತ್ತಿದೆ. ಮುಂದಿನ ಚುನಾವಣೆ ಕೂಡಾ ಹೀಗೆಯೇ ನಡೆಯುತ್ತದೆ’ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ, ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಇಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

‘ಪತ್ರಿಕಾ ಭೇಟಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹವಾಲ ಹಗರಣ ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ‘ಬಿಜೆಪಿ ಕೂಡಾ ಈ ವ್ಯವಸ್ಥೆಯ ಒಂದು ಭಾಗ. ಹಾಗಾಗಿ, ವ್ಯವಸ್ಥೆಯ ಒಳಗೆ ಇದ್ದುಕೊಂಡೇ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ’ ಎಂದು ವಾಜಪೇಯಿ ಹೇಳಿದರು.

ಭಾರತಕ್ಕೆ ನಿರೀಕ್ಷೆಗೂ ಮೀರಿದ ಸುಲಭ ಜಯ ತಂದ ಪುಲಕ
ಬೆಂಗಳೂರು, ಮಾರ್ಚ್ 9–
ಸವಾಲೆನ್ನಿಸುವ ಮೊತ್ತಕ್ಕೂ ಪಾಕಿಸ್ತಾನ ತಂಡದವರು ‘ಸೇರಿಗೆ ಸವಾಸೇರು’ ಎನ್ನುವಂತೆ ಹಾಕಿದ ಲಗ್ಗೆಯಿಂದ ತತ್ತರಿಸಿದ್ದ ಭಾರತ ತಂಡದವರು ಶ್ರೀನಾಥ್, ವೆಂಕಟೇಶ್ ಪ್ರಸಾದ್ ಹಾಗೂ ಅನಿಲ್ ಕುಂಬ್ಳೆ ಅವರ ‘ಸೇಡಿನ ಪ್ರತಿದಾಳಿ’ಯ ಮೂಲಕ ಚೇತರಿಸಿಕೊಂಡು, 39 ರನ್‌ಗಳಿಂದ ಗೆದ್ದು ವಿಲ್ಸ್ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್ ಸೆಮಿಫೈನಲ್ ತಲುಪಿದರು.

ADVERTISEMENT

ಅನಿಲ್ ಕುಂಬ್ಳೆ ಒಂದು ದಿನದ ಅಂತರ ರಾಷ್ಟ್ರೀಯ ಪಂದ್ಯಗಳಲ್ಲಿ ವಿಕೆಟ್ ಶತಕ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.