ADVERTISEMENT

25 ವರ್ಷಗಳ ಹಿಂದೆ: ಭಾನುವಾರ 7–4–1996

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 19:30 IST
Last Updated 6 ಏಪ್ರಿಲ್ 2021, 19:30 IST
   

ಕೇಂದ್ರ ಮಂತ್ರಿ, ರಾಜ್ಯದ 4 ಸಚಿವರು ಸೇರಿ ಕಣದಲ್ಲಿ 978 ಸ್ಪರ್ಧಿಗಳು

ಬೆಂಗಳೂರು, ಏ. 6– ಕೇಂದ್ರ ಸಚಿವ ಎಂ.ವಿ.ಚಂದ್ರಶೇಖರ ಮೂರ್ತಿ, ಹಿರಿಯ ಮುಖಂಡರುಗಳಾದ ಎಸ್.ಮಲ್ಲಿಕಾರ್ಜುನಯ್ಯ, ಬಿ.ಶಂಕರಾನಂದ, ಜನಾರ್ದನ ಪೂಜಾರಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಎಸ್.ಬಂಗಾರಪ್ಪ, ಆಸ್ಕರ್ ಫರ್ನಾಂಡಿಸ್ ಹಾಗೂ ರಾಜ್ಯದ ನಾಲ್ವರು ಸಚಿವರೂ ಸೇರಿದಂತೆ ಒಟ್ಟು 978 ಅಭ್ಯರ್ಥಿಗಳು ಲೋಕಸಭೆಯ 28 ಸ್ಥಾನಗಳ ಸ್ಪರ್ಧಿಗಳಾಗಿ ಕಣದಲ್ಲಿ ಉಳಿದಿದ್ದಾರೆ.

ಏ. 27 ಮತ್ತು ಮೇ 2ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಬೆಳಗಾವಿ ಕ್ಷೇತ್ರದಲ್ಲಿ 456 ಅಭ್ಯರ್ಥಿಗಳಿರುವುದರಿಂದ ಚುನಾವಣಾ ಚಿಹ್ನೆಯನ್ನು ವಿತರಣೆ ಮಾಡುವುದೇ ದುಸ್ತರವಾಗಿರುವ ಹಿನ್ನೆಲೆಯಲ್ಲಿ ಅಲ್ಲಿಯ ಚುನಾವಣಾ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮಾನ್ಯತೆ ಪಡೆದಿರುವ ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರಿಗೆ ಹಂಚು ವುದಕ್ಕೆ ಚಿಹ್ನೆ ಕೊರತೆಯಾಗಿರುವುದೇ ಈ ಪ್ರಕ್ರಿಯೆ ಸ್ಥಗಿತಗೊಳ್ಳಲು ಕಾರಣ ಎಂದು ಅಧಿಕೃತ ಮೂಲಗಳು ವಿವರಿಸಿವೆ.

ADVERTISEMENT

ರಾಷ್ಟ್ರಪತಿ ಕ್ಷಮಿಸಿದರೆ ಶರಣು– ವೀರಪ್ಪನ್
ಮದ್ರಾಸ್, ಏ. 6 (ಪಿಟಿಐ)–
ಕುಖ್ಯಾತ ದಂತಚೋರ ವೀರಪ್ಪನ್, ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರು ‘ಸಂಪೂರ್ಣ ಕ್ಷಮಾದಾನ’ದ ಅಭಯ ನೀಡಿದಲ್ಲಿ ತಾನು ಶರಣಾಗಲು ಸಿದ್ಧನಿರುವು ದಾಗಿ ಘೋಷಿಸಿದ್ದಾನೆ.

ವೀರಪ್ಪನ್ ತಮಿಳು ವಾರಪತ್ರಿಕೆ ‘ನಕ್ಕೀರನ್’ಗೆ ವಿಡಿಯೊ ಸಂದರ್ಶನ ನೀಡಿದ್ದು, ಸಂದರ್ಶನವನ್ನು ಖಾಸಗಿ ಉಪಗ್ರಹ ಚಾನೆಲ್ ‘ಸನ್’ ಟಿ.ವಿ ನಾಳೆ ರಾತ್ರಿ 9 ಗಂಟೆಗೆ ಪ್ರಸಾರ ಮಾಡಲಿದೆ. ಈ ಸಂದರ್ಶನ ಧಾರಾವಾಹಿ ರೂಪದಲ್ಲಿ 9 ವಾರಗಳ ಕಾಲ ಪ್ರಸಾರಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.