ADVERTISEMENT

25 ವರ್ಷಗಳ ಹಿಂದೆ: ಶನಿವಾರ, ಮಾರ್ಚ್ 7, 1998

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 19:30 IST
Last Updated 6 ಮಾರ್ಚ್ 2023, 19:30 IST
   

ಸರ್ಕಾರ ರಚನೆ: ರಾಷ್ಟ್ರಪತಿ ಆಹ್ವಾನಕ್ಕೆ ಬಿಜೆಪಿ ನಿರೀಕ್ಷೆ
ನವದೆಹಲಿ, ಮಾರ್ಚ್‌ 6 (ಯುಎನ್‌ಐ, ಪಿಟಿಐ)–
‘ಭಾರತೀಯ ಜನತಾ ಪಕ್ಷವು ಕೇಂದ್ರದಲ್ಲಿ ತಾನಾಗಿಯೇ ಸರ್ಕಾರ ರಚನೆ ಪ್ರಸ್ತಾವ ಮಂಡಿಸುವುದಿಲ್ಲ. ಬದಲಾಗಿ 12ನೇ ಲೋಕಸಭೆಯಲ್ಲಿ ಅತ್ಯಧಿಕ ಸ್ಥಾನ ಗಳಿಸಿರುವ ಆಧಾರದ ಮೇಲೆ ರಾಷ್ಟ್ರಪತಿಗಳ ಆಹ್ವಾನವನ್ನು ನಿರೀಕ್ಷೆ ಮಾಡಲಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇನ್ನೂ ಅಸ್ತಿತ್ವಕ್ಕೆ ಬರಬೇಕಾಗಿರುವ 12ನೇ ಲೋಕಸಭೆಯಲ್ಲಿ ಬಿಜೆಪಿ 177 ಸ್ಥಾನ ಗಳಿಸಿದೆ. ಅದರ ಮಿತ್ರಪಕ್ಷಗಳ ಸದಸ್ಯರೂ ಸೇರಿದರೆ ಅದರ ಬಲ 249ಕ್ಕೆ ಏರಲಿದೆ. ಸರ್ಕಾರ ರಚನೆಗೆ ಕೋರಲು ಕನಿಷ್ಠ ಬಹುಮತ 272 ಸದಸ್ಯ ಬೆಂಬಲದ ಅಗತ್ಯವಿದೆ.

‘ಚಂದ್ರ’ನಲ್ಲಿ ಅಪಾರ ನೀರಿ ಶೋಧನೆ
ವಾಷಿಂಗ್ಟನ್‌, ಮಾರ್ಚ್‌ 6 (ಪಿಟಿಐ, ಎಪಿ)–
ಮಾನವನ ವಸಾಹತುವನ್ನು ನೂರು ವರ್ಷಗಳ ಕಾಲ ಅಥವಾ ನೂರಾರು ವರ್ಷಗಳ ಕಾಲ ಸ್ಥಾಪಿಸಲು ಸಾಕಾಗುವಷ್ಟು ನೀರು ಚಂದ್ರನಲ್ಲಿ ಇರುವುದು ಬೆಳಕಿಗೆ ಬಂದಿದೆ.

ADVERTISEMENT

ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ‘ನಾಸಾ’ ವಿಜ್ಞಾನಿಗಳ ಪ್ರಕಾರ ಕಳೆದ ತಿಂಗಳು ರೋಬಟ್‌ ಮೂಲಕ ಕೈಗೊಂಡ ಅಧ್ಯಯನದಲ್ಲಿ ಚಂದ್ರನಲ್ಲಿ ನೀರು ಇರುವುದು ಪತ್ತೆಯಾಗಿದೆ. ಆದರೆ ಇಲ್ಲಿರುವ ನೀರನ್ನು ಯಾವ ರೀತಿ ಯಾವ ಉದ್ದೇಶಕ್ಕೆ ಬಳಸಬಹುದೆಂಬುದು ತಿಳಿದು ಬಂದಿಲ್ಲ. ಏಕೆಂದರೆ ರೊಬಟ್‌ ನೀಡಿರುವ ಮಾಹಿತಿ ಪ್ರಕಾರ ಚಂದ್ರನಲ್ಲಿರುವ ಹಳ್ಳಗಳಲ್ಲಿ ನೀರು ಸಣ್ಣ ಸಣ್ಣ ಪ್ರಮಾಣದಲ್ಲಿದ್ದು ಸಾವಿರಾರು ಚದರ ಮೈಲುಗಳಲ್ಲಿ ವ್ಯಾಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.