ಬೆಂಗಳೂರು, ಜುಲೈ 2– ಹುಬ್ಬಳ್ಳಿಯಲ್ಲಿ ಪ್ರತ್ಯೇಕ ರೈಲ್ವೆ ವಲಯ ಸ್ಥಾಪನೆ ಕುರಿತು ‘ಪರಿಶೀಲಿಸಬಹುದು’ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಬಂಗಾರು ಲಕ್ಷ್ಮಣ್ ಅವರು, ಇಂದು ಇಲ್ಲಿ ಹೇಳಿದರು.
ಬೆಂಗಳೂರು– ಜೋಧಪುರ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಲು ಇಲ್ಲಿಗೆ ಆಗಮಿಸಿದ್ದ ಅವರು, ‘ಪ್ರತ್ಯೇಕ ರೈಲ್ವೆ ವಲಯ ಸ್ಥಾಪನೆ ಅಸಾಧ್ಯವೇನೂ ಅಲ್ಲ’ ಎಂಬುದನ್ನು ಪತ್ರಿಕಾಗೋಷ್ಠಿಯಲ್ಲಿ ಸೂಚ್ಯವಾಗಿ ಹೇಳಿದರು.
ಬೆಂಗಳೂರಿನಲ್ಲಿಯೇ ನೈರುತ್ಯ ರೈಲ್ವೆ ವಲಯ ಉಳಿಯಬೇಕು ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಕೇಂದ್ರ ಕಾನೂನು
ಸಚಿವಾಲಯದೊಂದಿಗೆ ಸಮಾಲೋಚಿಸಲಾಗುವುದು. ಇಡೀ ತೀರ್ಪನ್ನು ಆಮೂಲಾಗ್ರವಾಗಿ ಪರಿಶೀಲಿಸಿದ ನಂತರವೇ ‘ಕೇಂದ್ರ ಮುಂದಿನ ಹೆಜ್ಜೆ ಇಡಲು ಸಾಧ್ಯ’ ಎಂದು ಅವರು ನುಡಿದರು.
ಫುಟ್‌ಬಾಲ್: ಫ್ರಾನ್ಸ್ ಮಡಿಲಿಗೆ ಯೂರೊ ಕಪ್
ರೊಟರ್ಡರ್ಮ್, ಜುಲೈ 2– ಫ್ರಾನ್ಸ್‌ನ ಫುಟ್‌ಬಾಲ್ ತಂಡವು ಯೂರೊ ಕಪ್ ಅನ್ನು ಮುಡಿಗೇರಿಸಿಕೊಂಡಿತು. ಇಂದು ನಡೆದ ಫೈನಲ್‌ನಲ್ಲಿ ಇಟಲಿ ತಂಡವನ್ನು 2–1 ಗೋಲುಗಳಿಂದ ಸೋಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.