ADVERTISEMENT

25 ವರ್ಷಗಳ ಹಿಂದೆ: ಸೋಮವಾರ, 15–09–1997

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 19:30 IST
Last Updated 14 ಸೆಪ್ಟೆಂಬರ್ 2022, 19:30 IST
   

l ಮಧ್ಯಪ್ರದೇಶ: ರೈಲು ದುರಂತ– 36 ಸಾವು

ಭೋಪಾಲ್‌, ಸೆಪ್ಟೆಂಬರ್‌ 14 (ಪಿಟಿಐ, ಯುಎನ್‌ಐ)– ಅಹ್ಮದಾಬಾದ್‌– ಹೌರಾ ಎಕ್ಸ್‌ಪ್ರೆಸ್‌ ರೈಲಿನ ಐದು ಬೋಗಿಗಳು ಇಂದು ಸಂಜೆ ಮಧ್ಯಪ್ರದೇಶದ ಬಿಲಾಸ್‌ಪುರದ ಚಂಪಾ ಸಮೀಪ ಹಳಿ ತಪ್ಪಿ ಸೇತುವೆಯಿಂದ ನದಿಗೆ ಬಿದ್ದು, ಕನಿಷ್ಠ 36 ಮಂದಿ ಪ್ರಯಾಣಿಕರು ಸತ್ತಿದ್ದಾರೆ. ಇತರೆ 200ಕ್ಕೂ ಹೆಚ್ಚೂ ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

l ಪ್ರಸಾರ ಭಾರತಿ ಜಾರಿಗೆ

ADVERTISEMENT

ನವದೆಹಲಿ, ಸೆಪ್ಟೆಂಬರ್‌ 14 (ಪಿಟಿಐ)– ಆಕಾಶವಾಣಿ ಹಾಗೂ ದೂರದರ್ಶನಗಳಿಗೆ ಸ್ವಾಯತ್ತತೆ ನೀಡುವ ಪ್ರಸಾರ ಭಾರತಿಕಾಯ್ದೆ ನಾಳೆಯಿಂದ ಜಾರಿಗೆ ಬರಲಿದೆ. ಈ ಕಾಯ್ದೆಯಲ್ಲಿರುವ ಒಂದು ವಿಧಿ, ಕಾರ್ಯಕ್ರಮವೊಂದರ ಪ್ರಸಾರವನ್ನು ಕೆಲವು ಕಾರಣಗಳಿಂದ ತಡೆಹಿಡಿಯುವ ಅಧಿಕಾರವನ್ನು ಇನ್ನೂ ಸರ್ಕಾರಕ್ಕೆ ಉಳಿಸುತ್ತದೆ. ಈ ಹಿನ್ನೆಲೆಯಲ್ಲಿ ಈ ಕಾಯ್ದೆಯು ನಿಜವಾಗಿಯೂ ಆಕಾಶವಾಣಿ– ದೂರದರ್ಶನಗಳಿಗೆ ಸ್ವಾತಂತ್ರ್ಯ ನೀಡುವುದೇ ಎಂಬ ಬಗ್ಗೆ ಈ ಎರಡೂ ಮಾಧ್ಯಮಗಳ ಸಿಬ್ಬಂದಿಗೆ ಅನುಮಾನವಿದೆ.

l ವಿಶಾಖಪಟ್ಟಣ ತೈಲಾಗಾರದಲ್ಲಿ ಭೀಕರ ಅಗ್ನಿ ಆಕಸ್ಮಿಕಕ್ಕೆ 20 ಬಲಿ

ಹೈದರಾಬಾದ್‌, ಸೆಪ್ಟೆಂಬರ್‌ 14 (ಪಿಟಿಐ)– ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ನ
ವಿಶಾಖಪಟ್ಟಣದ ತೈಲಾಗಾರದಲ್ಲಿ ಇಂದು ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ 20 ಜನರುಮೃತಪಟ್ಟಿದ್ದು, ಇತರ 12 ಮಂದಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.