ADVERTISEMENT

ಪಂಚಲಿಂಗ ದರ್ಶನಕ್ಕೆ ಭಾರಿ ಜನಸ್ತೋಮ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 17:15 IST
Last Updated 13 ಡಿಸೆಂಬರ್ 2018, 17:15 IST

ಪಂಚಲಿಂಗ ದರ್ಶನಕ್ಕೆ ಭಾರಿ ಜನಸ್ತೋಮ

ಮೈಸೂರು, ಡಿ. 13– ಏಳು ವರ್ಷಗಳ ನಂತರ ಒದಗಿ ಬಂದಿರುವ ಪಂಚಲಿಂಗ ದರ್ಶನಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪಂಚಲಿಂಗದರ್ಶನ ಮಹೋತ್ಸವ ಭಾನುವಾರ ಮಧ್ಯರಾತ್ರಿಯಿಂದ ಆರಂಭವಾಗಿ ಸೋಮವಾರದ ಸೂರ್ಯೋದಯದವರೆಗೆ ತಲಕಾಡಿನಲ್ಲಿ ನಡೆಯಿತು.

ಹಳೆಯ ಕಾಂಗ್ರೆಸ್ಸಿಗರಿಗೆ ಪಕ್ಷ ಸೇರಲು ಮೊಯಿಲಿ ಆಹ್ವಾನ

ADVERTISEMENT

ಮೈಸೂರು, ಡಿ. 13– ಕೋಮುವಾದಿ ಶಕ್ತಿಗಳನ್ನು ಬಗ್ಗು ಬಡಿಯುವುದಕ್ಕಾಗಿ ಕಾಂಗೈ ಪಕ್ಷವನ್ನು ಬಲಪಡಿಸಲು ಜನತಾ ದಳದ ಹಿರಿಯ ನಾಯಕ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸೇರಿದಂತೆ ಎಲ್ಲ ಹಳೆಯ ಕಾಂಗ್ರೆಸ್ ಮುಖಂಡರು ಪಕ್ಷಕ್ಕೆ ಹಿಂದಿರುಗಬೇಕೆಂದು ಮುಖ್ಯಮಂತ್ರಿ ಮೊಯಿಲಿ ಅವರು ಕರೆ ನೀಡಿದ್ದಾರೆ.

ರುಷುವತ್ತು–ನ್ಯಾಯಾಂಗ ತನಿಖೆ

ನವದೆಹಲಿ, ಡಿ. 13 (ಯುಎನ್‌ಐ)– ರಮೇಶ್ ಭಂಡಾರಿ ಪ್ರಕರಣ ಹಾಗೂ ಹರ್ಷದ್ ಮೆಹ್ತಾ ಅವರು ಪಿ.ವಿ. ನರಸಿಂಹ ರಾವ್ ಅವರಿಗೆ ಒಂದು ಕೋಟಿ ರೂ. ರುಷುವತ್ತು ನೀಡಿರುವುದಾಗಿ ಹೇಳಿರುವ ಪ್ರಕರಣಗಳ ಬಗ್ಗೆ ಪ್ರತ್ಯೇಕ ನ್ಯಾಯಾಂಗ ತನಿಖೆಯಾಗಬೇಕು ಎಂದು ಕೋರಿಕೆ ಸಲ್ಲಿಸಿ ಷೇರು ಹಗರಣದ ತನಿಖೆ ನಡೆಸಿರುವ ಜಂಟಿ ಸಂಸದೀಯ ಸಮಿತಿಯ 13 ಮಂದಿ ಕಾಂಗೈಯೇತರ ಸದಸ್ಯರು ಸಮಿತಿಯ ಅಧ್ಯಕ್ಷರಿಗೆ ಪತ್ರವೊಂದನ್ನು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.