ADVERTISEMENT

ಪ್ರಧಾನಿಗೆ ಮತ್ತೆ ಮುಖ್ಯಮಂತ್ರಿ ಪತ್ರ: ಮಹಾಜನ್ ವರದಿ ಜಾರಿಗೆ ಆಗ್ರಹ

ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 17:28 IST
Last Updated 18 ಸೆಪ್ಟೆಂಬರ್ 2019, 17:28 IST

ಪ್ರಧಾನಿಗೆ ಮತ್ತೆ ಮುಖ್ಯಮಂತ್ರಿ ಪತ್ರ: ಮಹಾಜನ್ ವರದಿ ಜಾರಿಗೆ ಆಗ್ರಹ

ಬೆಂಗಳೂರು, ಸೆ. 18– ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಇಂದು ಪತ್ರ ಬರೆದು ಮಹಾಜನ್ ಆಯೋಗದ ಶಿಫಾರಸುಗಳನ್ನು ಕೂಡಲೇ ಕಾರ್ಯಗತ ಮಾಡುವಂತೆ ಮಾಡಲು ತಮ್ಮ ಅಧಿಕಾರವನ್ನು ಉಪಯೋಗಿಸಬೇಕೆಂದು ಪ್ರಾರ್ಥಿಸಿದ್ದಾರೆ.

ತೀರ್ಪಿನಂತಿರುವ ಮಹಾಜನ್ ಆಯೋಗದ ಶಿಫಾರಸುಗಳನ್ನು ಕಾರ್ಯಗತ ಮಾಡಬೇಕೆಂದು ತಾವು ಅನೇಕ ಪತ್ರಗಳನ್ನು ಬರೆದಿರುವುದನ್ನು ಶ್ರೀ ಪಾಟೀಲರು ಪ್ರಧಾನಿಯವರಿಗೆ ನೆನಪು ಮಾಡಿಕೊಟ್ಟು, ಕಾರ್ಯಗತ ಮಾಡುವುದನ್ನು ಕೇಂದ್ರ ಸರ್ಕಾರ ಒಂದೇ ಸಮನೆ ತಡಮಾಡಿರುವುದರಿಂದ ಮೈಸೂರು ರಾಜ್ಯದ ಜನತೆಯ ಮನಸ್ಸು ತುಂಬ ಕಲಕಿದೆ ಎಂದು ತಿಳಿಸಿದ್ದಾರೆ.

ADVERTISEMENT

ಎರಡು ವರ್ಷಗಳಿಗೂ ಹಿಂದೆ ಕೇಂದ್ರ ಗೃಹ ಶಾಖೆಗೆ ಆಯೋಗದ ಶಿಫಾರಸು ಗಳನ್ನು ಸಲ್ಲಿಸಲಾಗಿದ್ದು ಶಿಫಾರಸುಗಳನ್ನು ಕಾರ್ಯಗತ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಪತ್ರದಲ್ಲಿ ತಿಳಿಸಿದ್ದಾರೆ.

ವಿಯಟ್ನಾಂ ಸಮರ ಅಂತ್ಯಕ್ಕೆ ಹಾನಾಯ್ ಮನ ಒಲಿಸಲು ಕರೆ

ವಿಶ್ವಸಂಸ್ಥೆ, ಸೆ. 18– ವಿಯಟ್ನಾಂ ಸಮರವನ್ನು ಅಂತ್ಯಗೊಳಿಸುವುದಕ್ಕಾಗಿ ತೀವ್ರ ಸಂಧಾನ ನಡೆಸುವಂತೆ ಹಾನಾಯ್ ಮನವೊಲಿಸಲು ರಾಜತಾಂತ್ರಿಕ ಪ್ರಯತ್ನಗಳನ್ನು ಕೈಗೊಳ್ಳುವಂತೆ ಅಧ್ಯಕ್ಷ ನಿಕ್ಸನ್ ಅವರು ಇಂದು ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿಕೊಂಡರು.

ವಿಶ್ವಸಂಸ್ಥೆಯ 24ನೇ ಮಹಾಧಿವೇಶನ ದಲ್ಲಿ ಇಂದು ಆರಂಭವಾದ ವಿಶ್ವ ವ್ಯವ ಹಾರಗಳ ಚರ್ಚೆಯಲ್ಲಿ ಅವರು ಎರಡನೆಯ ಭಾಷಣಕಾರರಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.