ADVERTISEMENT

ಗುರುವಾರ, 9–10–1969

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 20:00 IST
Last Updated 8 ಅಕ್ಟೋಬರ್ 2019, 20:00 IST

ಧಾನ್ಯ ಕೊಳ್ಳಲು ಆಹಾರ ಕಾರ್ಪೊರೇಷನ್‌ಗೆ ರಾಜ್ಯ ಸರ್ಕಾರದ ಸೂಚನೆ
ಬೆಂಗಳೂರು, ಅ. 8–
ರಾಜ್ಯದ ಕೆಲವೆಡೆ ಗಳಲ್ಲಿ ಆಹಾರ ಧಾನ್ಯಗಳ ಬೆಲೆಯು ‘ಕುಸಿಯತೊಡಗಿರುವುದನ್ನು’ ಗಮನಿಸಿದ ರಾಜ್ಯ ಸರ್ಕಾರ, ಕನಿಷ್ಠ ಆಧಾರ ದರದಲ್ಲಿ ಧಾನ್ಯವನ್ನು ಕೊಂಡು ಸಂಗ್ರಹಿಸುವಂತೆ ಆಹಾರ ಕಾರ್ಪೊರೇಷನ್‌ನ ರಾಜ್ಯ ಘಟಕಕ್ಕೆ ಸೂಚನೆ ನೀಡಿದೆ.

ಕೋಮು ಗಲಭೆ ಬಗ್ಗೆ ಏಪ್ರಿಲ್‌ನಲ್ಲೇ ಗುಜರಾತ್‌ಗೆ ಕೇಂದ್ರದ ಮುನ್ನೆಚ್ಚರಿಕೆ
ನವದೆಹಲಿ, ಅ. 8–
ಗುಜರಾತ್ ರಾಜ್ಯದಲ್ಲಿ ಕೋಮು ಪರಿಸ್ಥಿತಿ ಹದಗೆಡುತ್ತಿರುವುದರ ಬಗ್ಗೆ ಕೇಂದ್ರ ಸರ್ಕಾರ ಏಪ್ರಿಲ್‌ ವೇಳೆಗೇ ಆ ಸರ್ಕಾರದ ಗಮನವನ್ನು ಸೆಳೆದಿತ್ತು ಎಂದು ಗೃಹ ಖಾತೆಯ ಸಂಸತ್ ಸಮಾಲೋಚನಾ ಸಮಿತಿಗೆ ಗೃಹ ಸಚಿವ ಶ್ರೀ ವೈ.ಬಿ. ಚವಾಣರು ಇಂದು ಖಚಿತಪಡಿಸಿದರು.

ಪಾಕ್‌ ನಿಲುವಿನಲ್ಲಿ ಮಾರ್ಪಾಡಿನ ಸ್ಪಷ್ಟ ಸೂಚನೆ: ದ್ವಿಪಕ್ಷೀಯ ಚರ್ಚೆ ಬಗ್ಗೆ ದಿನೇಶ್ ವ್ಯಾಖ್ಯೆ
ನವದೆಹಲಿ, ಅ. 8–
ವಿವಾದಗಳ ಇತ್ಯರ್ಥಕ್ಕೆ ನೇರ ಚರ್ಚೆಯೇ ಮೇಲು ಎಂಬ ಭಾವನೆ ಪಾಕಿಸ್ತಾನದ ನಾಯಕರಲ್ಲಿ ಮೂಡಿಬರುತ್ತಿರುವ ಸ್ಪಷ್ಟ ಸೂಚನೆಗಳಿವೆ.

ADVERTISEMENT

ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರನ್ನು ಈಚೆಗೆ ಭೇಟಿ ಮಾಡಿ, ಇಂದು ಬೆಳಿಗ್ಗೆ ದೆಹಲಿಗೆ ಹಿಂದಿರುಗಿದ ವಿದೇಶಾಂಗ ಸಚಿವ ದಿನೇಶ್‌ ಸಿಂಗ್‌ರ ಅಭಿಪ್ರಾಯವಿದು.

ಎರಡು ದೇಶಗಳ ನಡುವಿನ ಸಮಸ್ಯೆಗಳ ಇತ್ಯರ್ಥಕ್ಕೆ ದ್ವಿಪಕ್ಷೀಯ ಸಂಧಾನವೇ ಶ್ರೇಷ್ಠ ಮಾರ್ಗವೆಂಬುದು ಭಾರತದ ಅಭಿಪ್ರಾಯವಾಗಿದ್ದು, ಈ ಭಾವನೆಯತ್ತ ಪಾಕಿಸ್ತಾನವೂ ತಿರುಗುತ್ತಿದೆ ಎಂದವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.