ADVERTISEMENT

ಗುರುವಾರ, 13–11–1969

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 19:48 IST
Last Updated 12 ನವೆಂಬರ್ 2019, 19:48 IST

ನವದೆಹಲಿ, ನ. 12– ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಿಂಡಿಕೇಟ್ ಗುಂಪು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರನ್ನು ಸಂಸ್ಥೆಯ ಪ್ರಾಥಮಿಕ ಸದಸ್ಯತ್ವದಿಂದ ಇಂದು ತೆಗೆದುಹಾಕಿತಲ್ಲದೆ ತತ್‌ಕ್ಷಣವೇ ಹೊಸ ನಾಯಕರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷಕ್ಕೆ ಕರೆಯಿತ್ತಿತು.

ಪಾರ್ಲಿಮೆಂಟರಿ ಪಕ್ಷದ ಸಭೆಯು ನಾಳೆ ನಡೆಯಬೇಕಾಗಿದೆ. ಪಕ್ಷದ ನಾಯಕರಾಗಿರುವ ಪ್ರಧಾನಿಯವರು ಈ ಸಭೆಯನ್ನು ಕರೆದಿರುವರು.

‘ಕಾಂಗ್ರೆಸ್ ಸಂಸ್ಥೆಯಲ್ಲಿ ಅಶಿಸ್ತನ್ನು ಹರಡುವ ಇಂದಿರಾ ಗಾಂಧಿ ಅವರ ಮನೋಭಾವ ಹಾಗೂ ಕ್ರಮಗಳಿಗಾಗಿ’ ಅವರ ವಿರುದ್ಧ ಕಾರ್ಯಸಮಿತಿ ಈ ಕ್ರಮವನ್ನು ಕೈಗೊಂಡಿತು.

ADVERTISEMENT

ಶ್ರೀಮತಿ ಗಾಂಧಿ ಅವರು ಸಂಸತ್ತಿನಲ್ಲಿನ ಕಾಂಗ್ರೆಸ್ ಪಕ್ಷದ ನಾಯಕರಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಮತ್ತು ಕಾರ್ಯಸಮಿತಿಯಲ್ಲಿನ ಅವರ 10 ಮಂದಿ ಬೆಂಬಲಿಗರು ಇದೇ ಸಮಯದಲ್ಲಿ ಘೋಷಿಸಿದ್ದಾರೆ.

ಇಂದಿರಾಗೆ ಬೆಂಬಲವಾಗಿ ನಿಲ್ಲಲು ಕಾಂಗ್ರೆಸ್ಸಿಗರಿಗೆ 168 ಎಂ.ಪಿ.ಗಳ ಕರೆ
ನವದೆಹಲಿ, ನ. 12– ಪ್ರಧಾನಿ ಇಂದಿರಾ ಗಾಂಧಿಯವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಧಾರವು, ‘ಹೇಡಿತನದ, ಏಕಪಕ್ಷೀಯ ಹಾಗೂ ಅಂಗರಚನೆಗೆ ವಿರುದ್ಧವಾದ’ ಕ್ರಮವೆಂದು ಸಂಸತ್ತಿನ 168 ಮಂದಿ ಕಾಂಗ್ರೆಸ್ ಸದಸ್ಯರು ಇಲ್ಲಿ ಇಂದು ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಘೋಷಿಸಿದ್ದಾರೆ. ಈ ಅರ್ಥ ಬರುವ ನಿರ್ಣಯವೊಂದನ್ನು ಅಂಗೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.