ADVERTISEMENT

50 ವರ್ಷಗಳ ಹಿಂದೆ: ಶನಿವಾರ 6.5.1972

​ಪ್ರಜಾವಾಣಿ ವಾರ್ತೆ
Published 5 ಮೇ 2022, 19:30 IST
Last Updated 5 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಫಿರಂಗಿ ಬೆಂಬಲದೊಡನೆ ಭಾರತ ಸೇನಾ ಸ್ಥಾನದ ಮೇಲೆ ಪಾಕ್‌ ದಾಳಿ

ನವದೆಹಲಿ, ಮೇ 5– ಫಿರಂಗಿಗಳ ಬೆಂಬಲದೊಡನೆ ಪಾಕಿಸ್ತಾನಿ ಸೈನಿಕರು ಇಂದು ಬೆಳಿಗ್ಗೆ ಕಾಶ್ಮೀರದ ಕೈಯಾನ್‌ ಪ್ರದೇಶದಲ್ಲಿ ಭಾರತ ಸೇನೆಯ ವಶದಲ್ಲಿರುವ ಸ್ಥಾನವೊಂದರ ಮೇಲೆ ದಾಳಿ ನಡೆಸಿದರು.

ಈ ಸ್ಥಾನವು ತಿತ್ವಾಲ್‌ಗೆ ಆಗ್ನೇಯಕ್ಕೆ ಹದಿನಾರು ಕಿಲೋಮೀಟರ್‌ ದೂರದಲ್ಲಿದೆ.

ADVERTISEMENT

ಕಳೆದ ಡಿಸೆಂಬರ್‌ನಲ್ಲಿ ನಡೆದ ಯುದ್ಧದ ಬಳಿಕ ಪಾಕಿಸ್ತಾನವು ಎಸಗಿರುವ ಕದನವಿರಾಮ ಉಲ್ಲಂಘನೆಯಲ್ಲಿ ಇಂದಿನದು ಅತ್ಯಂತ ತೀವ್ರ ಸ್ವರೂಪದ್ದೆಂದು ಹೇಳಲಾಗಿದೆ.

ದಕ್ಷಿಣ ವಿಯಟ್ನಾಂಗೆ ಅಮೆರಿಕದಿಂದ ಹೆಚ್ಚು ವಿಮಾನಗಳ ರವಾನೆ

ನ್ಯೂಯಾರ್ಕ್‌, ಮೇ 5– ಆರು ವಾರಗಳಲ್ಲಿ 2ನೇ ಬಾರಿಗೆ ಪ್ಯಾರಿಸ್‌ ಶಾಂತಿ ಮಾತುಕತೆ
ಯನ್ನು ಏಕಪಕ್ಷೀಯವಾಗಿ ರದ್ದುಪಡಿಸಿದ ನಿಕ್ಸನ್‌ ಆಡಳಿತ ಇಂದು ವಿಯಟ್ನಾಂ ಪ್ರದೇಶಕ್ಕೆ 6ನೇ ವಿಮಾನ ವಾಹಕ ನೌಕೆಯೊಂದನ್ನೂ, ಹೆಚ್ಚು ವಿಮಾನಗಳನ್ನೂ ಕಳುಹಿಸುವುದರ ಮೂಲಕ ಅಲ್ಲಿ ತನ್ನ ವಾಯುಪಡೆಯ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿತು. ಅಮೆರಿಕದ ವಿಮಾನ ಪಡೆ ವಿಯಟ್ನಾಂದಲ್ಲಿ ಈಗ ಒಂದು ಸಾವಿರದಷ್ಟು ಹೋರಾಟದ ವಿಮಾನಗಳನ್ನು ಹೊಂದಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.