ADVERTISEMENT

50 ವರ್ಷಗಳ ಹಿಂದೆ: ಬುಧವಾರ 4–3–1970

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 19:48 IST
Last Updated 3 ಮಾರ್ಚ್ 2020, 19:48 IST

ಮೈಸೂರು–ಮಹಾರಾಷ್ಟ್ರ ಗಡಿ ವಿವಾದ: ಉಭಯ ಸಮ್ಮತ ರಾಜಕೀಯ ಇತ್ಯರ್ಥ– ಕೇಂದ್ರದ ಯತ್ನ
ನವದೆಹಲಿ, ಮಾರ್ಚ್‌ 3–
ತನ್ನ ಸಲಹೆಗಳಿಗೆ ಮೈಸೂರು ಮತ್ತು ಮಹಾರಾಷ್ಟ್ರಗಳೆರಡರ ಅತಿ ಹೆಚ್ಚು ಸಮ್ಮತಿ ಗಳಿಸುವುದೇ ಕೇಂದ್ರ ಸರ್ಕಾರದ ಯತ್ನವಾಗಿದೆ ಎಂದು ರಾಜ್ಯಸಭೆಯಲ್ಲಿ ಇಂದು ಗಡಿ ವಿವಾದ ಕುರಿತ ಪ್ರಶ್ನೆಗಳಿಗೆ ಗೃಹ ಶಾಖೆ ಸ್ಟೇಟ್‌ ಸಚಿವ ವಿದ್ಯಾಚರಣ ಶುಕ್ಲಾ ಉತ್ತರವಿತ್ತರು.

ಕಾವೇರಿ ಜಲ ವಿವಾದ: ಕೇಂದ್ರದ ಮಧ್ಯಪ್ರವೇಶಕ್ಕೆ ಕರುಣಾನಿಧಿ ಒತ್ತಾಯ
ಮದ್ರಾಸ್‌, ಮಾರ್ಚ್‌ 3–
ತಮಿಳುನಾಡು ಮತ್ತು ಮೈಸೂರು ರಾಜ್ಯಗಳ ನಡುವಣ ಕಾವೇರಿ ಜಲ ವಿವಾದದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕೆಂದೂ ಸಮಸ್ಯೆಯ ಇತ್ಯರ್ಥ ಇನ್ನು ತಡವಾದರೆ ಅಪಾಯಕಾರಿ ಪರಿಣಾಮಗಳು ಉಂಟಾಗುವುವೆಂದೂ ತಮಿಳುನಾಡಿನ ಮುಖ್ಯಮಂತ್ರಿ ಶ್ರೀ ಎಂ.ಕರುಣಾನಿಧಿ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.

ಹೇಮಾವತಿ ಯೋಜನೆ ಪೂರ್ಣಗೊಂಡ ನಂತರ ಹೇಮಾವತಿ ನದಿಯಲ್ಲಿ ಮದ್ರಾಸಿಗೆ ಈಗ ಹರಿಯುತ್ತಿರುವಷ್ಟೇ ನೀರನ್ನು ಬಿಡುವ ಭರವಸೆ ಏನನ್ನೂ ಮೈಸೂರು ಸರ್ಕಾರ ನೀಡಿಲ್ಲವೆಂದು ಮೈಸೂರಿನ ಮುಖ್ಯಮಂತ್ರಿ ನಿನ್ನೆ ತಿಳಿಸಿರುವುದು ತಮಿಳುನಾಡು ಸರ್ಕಾರಕ್ಕೆ ತೀವ್ರ ಕಳವಳವನ್ನುಂಟು ಮಾಡಿದೆಯೆಂದು ಕರುಣಾನಿಧಿ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.