ADVERTISEMENT

ಶನಿವಾರ 11–4–1970

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 19:45 IST
Last Updated 10 ಏಪ್ರಿಲ್ 2020, 19:45 IST

ಬಜೆಟ್‌ ಅಧಿವೇಶನದಲ್ಲೇ ಗಡಿ ವಿಧೇಯಕ?

ನವದೆಹಲಿ, ಏ. 10– ಮೈಸೂರು ಮತ್ತು ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಪಡಿಸುವ ಉದ್ದೇಶ ಹೊಂದಿರುವವಿಧೇಯಕವೊಂದನ್ನು ಸಂಸತ್ತಿನ ಪ್ರಸಕ್ತ ಬಜೆಟ್‌ ಅಧಿವೇಶನದಲ್ಲಿ ಮಂಡಿಸುವುದಾಗಿ ಕೇಂದ್ರ ಸಚಿವರೊಬ್ಬರು ತಮಗೆ ತಿಳಿಸಿದ್ದಾರೆಂದು ಮೈಸೂರು ಶಾಸಕರ ಮೂರನೇ ನಿಯೋಗದ ನಾಯಕ ಶ್ರೀ ಎಸ್‌. ಗೋಪಾಲಗೌಡರು ಹೇಳಿದ್ದಾರೆ.

ವಿಧೇಯಕ ಮಂಡನೆಯ ವಿಷಯವನ್ನು ಕೇಂದ್ರ ಗೃಹಖಾತೆ ಸ್ಟೇಟ್‌ ಸಚಿವ ಶ್ರೀ ವಿ.ಸಿ. ಶುಕ್ಲಾ ಅವರು ಶ್ರೀ ಗೋಪಾಲಗೌಡ ಅವರಿಗೆ ತಿಳಿಸಿದರೆಂದು ತಿಳಿದುಬಂದಿದೆ.

ADVERTISEMENT

ನಗರಕ್ಕೆ ಚಲನಚಿತ್ರ ಸೆನ್ಸಾರ್‌ಮಂಡಲಿ ವರ್ಗಾವಣೆ: ಕೇಂದ್ರದಪರಿಶೀಲನೆಯಲ್ಲಿ

ನವದೆಹಲಿ, ಏ. 10– ಖೋಸ್ಲಾ ಸಮಿತಿ ಶಿಫಾರಸಿನಂತೆ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಲಿಯನ್ನು ಬೆಂಗಳೂರು ಅಥವಾ ನಾಗಪುರಕ್ಕೆ ಸ್ಥಳಾಂತರಿಸುವಪ್ರಶ್ನೆ ಸರ್ಕಾರದ ಪರಿಶೀಲನೆಯಲ್ಲಿದೆಎಂದು ವಾರ್ತಾ ಮತ್ತು ಪ್ರಸಾರ ಶಾಖೆ ಸಚಿವ ಶ್ರೀ ಐ.ಕೆ ಗುಜ್ರಾಲ್‌ಅವರು ಗುರುವಾರ ಲೋಕಸಭೆಗೆ ತಿಳಿಸಿದರು.‌

ಭಾರತೀಯ ಚಲನಚಿತ್ರ ತಯಾರಕರ ಸಂಘವು ಇಂತಹ ಸ್ಥಳಾಂತರಕ್ಕೆ ವಿರೋಧವಾಗಿದೆಯೆಂದೂ ಹೇಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.