ನವದೆಹಲಿ, ಮೇ 18– ಶಾಂತಿ ಉದ್ದೇಶದಿಂದ ರೂಪಿಸಿರುವ ಅಣುಸಾಧನ ಒಂದನ್ನು ಭಾರತವು ಇಂದು ಪರೀಕ್ಷಾರ್ಥವಾಗಿ ಭೂಗರ್ಭದಲ್ಲಿ ಸ್ಫೋಟಿಸಿ, ವಿಶ್ವದ ಅಣ್ವಸ್ತ್ರ ರಾಷ್ಟ್ರಗಳ ಪಂಕ್ತಿಯನ್ನು ಸೇರಿತು.
‘ಪಶ್ಚಿಮ ಭಾರತದಲ್ಲಿ’ 10ರಿಂದ 15 ಕಿಲೋಟನ್ ಸಾಮರ್ಥ್ಯದ ಅಣ್ವಸ್ತ್ರವನ್ನು ಬೆಳಿಗ್ಗೆ ಸ್ಫೋಟಿಸಲಾಯಿತೆಂದು ಅಣುಶಕ್ತಿ ಆಯೋಗದ ಅಧ್ಯಕ್ಷರು ಇಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆದರೆ, ಈ ಪರೀಕ್ಷೆ ಎಲ್ಲಿ ನಡೆಯಿತು ಎಂಬ ಮಾಹಿತಿಯನ್ನು ಹಂಚಿಕೊಳ್ಳಲು ಅವರು ನಿರಾಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.