ADVERTISEMENT

50 ವರ್ಷಗಳ ಹಿಂದೆ | ಶನಿವಾರ, 4–7–1970

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 19:30 IST
Last Updated 3 ಜುಲೈ 2020, 19:30 IST

ಕನ್ನಡ ಚಿತ್ರಗಳಿಗೆ ಸಹಾಯಧನ ಮುಂದುವರಿಕೆ: ಸಂಪುಟದ ತೀರ್ಮಾನ
ಬೆಂಗಳೂರು, ಜುಲೈ 3
– ರಾಜ್ಯದಲ್ಲಿ ತಯಾರಾಗುವ ಚಲನಚಿತ್ರಗಳಿಗೆ ಸಹಾಯಧನ ನೀಡುವ ಯೋಜನೆಯನ್ನು ಪ್ರಸಕ್ತ ವರ್ಷದಲ್ಲೂ, ಅಂದರೆ 1971ರ ಮಾರ್ಚಿ 31ನೇ ತಾರೀಖಿನವರೆಗೆ ಮುಂದುವರಿಸಲು ಇಂದು ನಡೆದ ಮಂತ್ರಿಮಂಡಲ ತೀರ್ಮಾನಿಸಿತು.

ರಾಜ್ಯದಲ್ಲಿ ತಯಾರಾಗುವ ಚಲನಚಿತ್ರಗಳಿಗೆ ಸಹಾಯಧನ ಕೊಡುವ ಯೋಜನೆಯನ್ನು ಮುಂದುವರಿಸಬೇಕೇ ಬೇಡವೇ ಎಂಬ ಪ್ರಶ್ನೆಯನ್ನು ಮಂತ್ರಿ ಮಂಡಲ ಪರಿಶೀಲಿಸಿತು. ಪ್ರಸಕ್ತ ವರ್ಷದಲ್ಲೂ ಈ ಯೋಜನೆಯನ್ನು ಮುಂದುವರಿಸಲು ತೀರ್ಮಾನಿಸಲಾಯಿತು ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು ವರದಿಗಾರರಿಗೆ ತಿಳಿಸಿದರು.

ಕಾಲೇಜು ಶಿಕ್ಷಕರ ನಿವೃತ್ತಿ ವಯಸ್ಸು 58 ವರ್ಷ
ಬೆಂಗಳೂರು, ಜುಲೈ 3–
ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುವ ಬೋಧಕ ವರ್ಗದ ನಿವೃತ್ತಿ ವಯಸ್ಸನ್ನು 58 ವರ್ಷಕ್ಕೇರಿಸಲು ಇಂದು ನಡೆದ ಮಂತ್ರಿಮಂಡಲ ತೀರ್ಮಾನಿಸಿತು.

ADVERTISEMENT

ವಿಶ್ವವಿದ್ಯಾನಿಲಯ ಕಾಲೇಜುಗಳ ಅಧ್ಯಾಪಕರ ನಿವೃತ್ತಿ ವಯಸ್ಸು 60 ವರ್ಷವೆಂದೂ ಖಾಸಗಿ ಕಾಲೇಜುಗಳಲ್ಲಿ 58 ವರ್ಷವೆಂದೂ ಸರ್ಕಾರಿಕಾಲೇಜುಗಳಲ್ಲಿ ಮಾತ್ರ 55 ವರ್ಷವಿತ್ತೆಂದೂ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು ನಿವೃತ್ತಿ ವಯೋಮಿತಿಯನ್ನು ಏರಿಸಿದ ನಿರ್ಧಾರಕ್ಕೆ ವಿವರಣೆಯನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.