ADVERTISEMENT

50 ವರ್ಷಗಳ ಹಿಂದೆ | ಗುರುವಾರ, 2–7–1970

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 19:30 IST
Last Updated 1 ಜುಲೈ 2020, 19:30 IST

ಇನ್ನೊಬ್ಬ ನೆಹರೂ
ಲಂಡನ್‌, ಜುಲೈ 1–
ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ತಮ್ಮ ನಿಕಟ ಸಹವರ್ತಿಗಳಿಗೂ ರುಚಿಸದ ಬದಲಾವಣೆಗಳನ್ನು ಮಾಡಿ ತಾವು ‘ಇನ್ನೊಬ್ಬ ನೆಹರೂ’ ಎಂದು ತೋರಿಸಿಕೊಂಡಿದ್ದಾರೆ ಎಂಬುದು ಫೈನಾನ್ಷಿಯಲ್‌ ಟೈಮ್ಸ್‌ ಅಭಿಪ್ರಾಯ.

‘20 ವರ್ಷಗಳಿಗೂ ಹೆಚ್ಚು ಕಾಲ ನೆಹರೂರವರು ಪ್ರತಿಸ್ಪರ್ಧಿಗಳಿಲ್ಲದ ನಾಯಕರಾಗಿದ್ದರು. ಅವರನ್ನು ತನ್ನ ನೆರಳಿನಲ್ಲಿ ಬೇರೇನೂ ಬೆಳೆಯಲಾಗದ ಆಲದ ಮರಕ್ಕೆ ಹೋಲಿಸಲಾಗುತ್ತಿತ್ತು. ಈಗ ಶ್ರೀಮತಿ ಗಾಂಧಿಯವರು ತಂದೆಗಿಂತ ಕಡಿಮೆ ಚಾಣಾಕ್ಷರಲ್ಲ ವೆಂದು ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದೆ.

ಟೆಲಿವಿಷನ್‌ ಪ್ರಸರಣದ ಉಪಕರಣ ತಯಾರಿಕೆ: ಬಿ.ಇ.ಎಲ್‌ ಯೋಜನೆ
ಬೆಂಗಳೂರು, ಜುಲೈ 1–
ಭಾರತದಲ್ಲಿ ಟೆಲಿವಿಷನ್‌ಗೆ ಹೆಚ್ಚುತ್ತಿರುವ ಬೇಡಿಕೆ ಯನ್ನು ಪೂರೈಸಲು ಸಂಬಂಧಿಸಿದ ಉಪಕರಣಗಳ ತಯಾರಿಕೆಗೆ ಬಿ.ಇ.ಎಲ್‌ ಉದ್ದೇಶಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.