ADVERTISEMENT

50 ವರ್ಷಗಳ ಹಿಂದೆ: ಗುರುವಾರ, 26–11–1970

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 19:45 IST
Last Updated 25 ನವೆಂಬರ್ 2020, 19:45 IST
   

18 ವರ್ಷದವರಿಗೆ ಮತದಾನದ ಹಕ್ಕು
ನವದೆಹಲಿ, ನ. 25–
ಮತದಾನದ ವಯೋಮಿತಿಯನ್ನು 21ರಿಂದ 18 ವರ್ಷಗಳಿಗೆ ಇಳಿಸಲು ಲೋಕಸಭೆಯ ಅರ್ಜಿಗಳ ಸಮಿತಿ ಶಿಫಾರಸು ಮಾಡಿದೆ.

ಈ ಸೂಚನೆಯ ವಿರುದ್ಧ ಪ್ರಬಲವಾದ ವಾದಗಳಿದ್ದರೂ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗೆ ಮತದಾನದ ಹಕ್ಕನ್ನು ನಿರಾಕರಿಸಲು ಸರಿಯಾದ ಕಾರಣವೇ ಇಲ್ಲ ಎಂದು ಇಂದು ಲೋಕಸಭೆಯಲ್ಲಿ ಮಂಡಿಸಿದ 9ನೇ ವರದಿಯಲ್ಲಿ ತಿಳಿಸಲಾಗಿದೆ.

ಐರೋಪ್ಯ ಕಾನ್ವೆಂಟುಗಳಿಗೆ ಸ್ವಂತ ಇಚ್ಛೆಯಿಂದ ಕೇರಳ ಕನ್ಯೆಯರು
ನವದೆಹಲಿ, ನ. 25–
ಐರೋಪ್ಯ ಕಾನ್ವೆಂಟುಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಯುವತಿಯರು ಸ್ವಸಂಕಲ್ಪ ದಿಂದ ಅಲ್ಲಿಗೆ ಹೋಗುತ್ತಿದ್ದಾರೆ ಎಂಬುದು– ವಿದೇಶಗಳಲ್ಲಿ ಭಾರತದ ನಿಯೋಗಗಳು ನಡೆಸಿರುವ ತನಿಖೆಗಳಿಂದ ಕಂಡುಬಂದಿರುವ ಸಂಗತಿ.

ADVERTISEMENT

ವಿದೇಶಾಂಗ ಸಚಿವ ಸ್ವರಣ್ ಸಿಂಗರು ಈ ವಿಷಯವನ್ನು ಇಂದು ರಾಜ್ಯಸಭೆಗೆ ತಿಳಿಸುತ್ತಾ, ಆ ಯುವತಿಯರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ, ಅನಪೇಕ್ಷಿತ ನಿರ್ಬಂಧಗಳಾವುವೂ ಅವರ ಮೇಲಿಲ್ಲ ಎಂದು ಹೇಳಿದರು.

ಐರೋಪ್ಯ ಕಾನ್ವೆಂಟುಗಳಿಗೆ ಕೇರಳದ ಹುಡುಗಿಯರನ್ನು ಮಾರಾಟ ಮಾಡಲಾಗಿದೆಯೆಂಬ ಆರೋಪವನ್ನನುಸರಿಸಿ ತನಿಖೆಗಳನ್ನು ಮಾಡಲಾಯಿತು. ಹುಡುಗಿಯರನ್ನು ಕಂಡು ಅವರ ಸ್ಥಿತಿಗತಿಗಳ ಬಗ್ಗೆ ಸರ್ಕಾರಕ್ಕೆ ತಿಳಿಸಬೇಕೆಂದು ನಿಯೋಗಗಳಿಗೆ ಆದೇಶ ಕೊಡಲಾಯಿತು ಎಂದು ಮಾನ್‌ಸಿಂಗ್ ವರ್ಮರಿಗೆ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.