ADVERTISEMENT

ಶುಕ್ರವಾರ, 9–5–1969

​ಪ್ರಜಾವಾಣಿ ವಾರ್ತೆ
Published 8 ಮೇ 2019, 20:15 IST
Last Updated 8 ಮೇ 2019, 20:15 IST

ಗಂಗಾ ನದಿ ನೀರು– ಹಕ್ಕಿನ ಶರಣು ಇಲ್ಲ: ದಿನೇಶ್‌ ಸಿಂಗ್
ನವದೆಹಲಿ, ಮೇ 8– ಗಂಗಾ ನದಿಯ ನೀರನ್ನು ಉಪಯೋಗಿಸಿಕೊಳ್ಳುವುದರಲ್ಲಿ ಭಾರತಕ್ಕಿರುವ ಹಕ್ಕನ್ನು ಬಿಟ್ಟುಕೊಡುವುದಿಲ್ಲವೆಂದು ವಿದೇಶ ವ್ಯವಹಾರಗಳ ಸಚಿವ ಶ್ರೀ ದಿನೇಶ್‌ ಸಿಂಗ್ ಅವರು ರಾಜ್ಯಸಭೆಯಲ್ಲಿ ಇಂದು ಭರವಸೆ ಇತ್ತರು.

‘ಗಂಗಾ ನದಿ ಅಂತರರಾಷ್ಟ್ರೀಯ ನದಿಯೆಂದು ನಾವು ಒಪ್ಪಿಕೊಳ್ಳುವುದಿಲ್ಲ. ಈ ನದಿಗೆ ಅಣೆಕಟ್ಟೆ ನಿರ್ಮಿಸುವುದು ನಮಗೆ ಸಂಬಂಧಿಸಿದ ವಿಷಯ’ ಎಂದು ಅವರು ತಿಳಿಸಿದರು.

ಪಲಿಮಾರು ಮಠದ ಹಿಂದಿನ ಸ್ವಾಮಿಗಳ ಲಗ್ನ; ಮೈಸೂರಿನಲ್ಲಿ ವಾಸ
ಉಡುಪಿ, ಮೇ 8– ಉಡುಪಿಯ ಪಲಿಮಾರು ಮಠಾಧಿಪತ್ಯ ತ್ಯಜಿಸಿದ ಶ್ರೀ ರಘುವಲ್ಲಭ ತೀರ್ಥ ಶ್ರೀಪಾದಂಗಳವರು ನಿನ್ನೆ ಸಂಸಾರಿಯಾದರು. ತಮ್ಮ ಸನ್ಯಾಸ ಪೂರ್ವದ ಹೆಸರಾದ ಲಕ್ಷ್ಮೀಶ ಎಂಬ ಹೆಸರನ್ನಿಟ್ಟುಕೊಂಡು ಜಯಂತಿ ಎಂಬ ಕನ್ಯೆಯನ್ನು ಮೇ 3ರಂದು ತಿರುಮಲೆ ತಿರುಪತಿಯಲ್ಲಿ ಅವರು ಮದುವೆಯಾದರೆಂದು ಇಲ್ಲಿಗೆ ಸುದ್ದಿ ಬಂದಿದೆ. ಶ್ರೀ ಲಕ್ಷ್ಮೀಶರು ಗೃಹಸ್ಥ ಜೀವನಕ್ಕೆ ಮೈಸೂರು ನಗರವನ್ನು ಆರಿಸಿರುವರೆಂದು ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.