ADVERTISEMENT

ಶನಿವಾರ, 1–11–1969

1969

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 19:57 IST
Last Updated 31 ಅಕ್ಟೋಬರ್ 2019, 19:57 IST

ಕಾರ್ಯಸಮಿತಿಯಿಂದ ಫಕ್ರುದ್ದೀನ್, ಸಿ. ಸುಬ್ರಹ್ಮಣ್ಯಂ ಉಚ್ಚಾಟನೆ

ನವದೆಹಲಿ, ಅ. 31– ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಿಂದ ಕೇಂದ್ರ ಕೈಗಾರಿಕಾ ಅಭಿವೃದ್ಧಿ ಸಚಿವ ಫಕ್ರುದ್ದೀನ್ ಅಲಿ ಅಹಮದ್‌ರವರನ್ನು ಕಾಂಗ್ರೆಸ್ ಅಧ್ಯಕ್ಷ ಎಸ್. ನಿಜಲಿಂಗಪ್ಪನವರು ಕೈಬಿಟ್ಟಿದ್ದಾರೆ.

ತಮಿಳುನಾಡು ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಶ್ರೀ ಸಿ. ಸುಬ್ರಹ್ಮಣ್ಯಂ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯತ್ವದಿಂದ ಅವರು ಅನರ್ಹಗೊಳಿಸಿದ್ದಾರೆ.

ADVERTISEMENT

ನಾಮಕರಣ ಮಾಡಿದ ಸದಸ್ಯರನ್ನು ತೆಗೆದುಹಾಕಲು ತಮಗೆ ಇರುವ ಹಕ್ಕನ್ನು ಚಲಾಯಿಸಿರುವುದಾಗಿ ಶ್ರೀ ಅಹ್ಮದ್ ಅವರಿಗೆ ಬರೆದ ಪತ್ರದಲ್ಲಿ ಶ್ರೀ ನಿಜಲಿಂಗಪ್ಪನವರು ತಿಳಿಸಿದ್ದಾರೆ.

ರೈತರ ಋಣ ಪರಿಹಾರ ಶಾಸನ ಅಕ್ರಮ: ಹೈಕೋರ್ಟ್ ತೀರ್ಪು

ಬೆಂಗಳೂರು, ಅ. 31– 1966ನೆಯ ಮೈಸೂರು ಕೃಷಿ ಸಾಲ ಪರಿಹಾರ ಶಾಸನ ಕ್ರಮಬದ್ಧವಲ್ಲ ಎಂದು ಮೈಸೂರು ಹೈಕೋರ್ಟಿನ ನ್ಯಾಯಮೂರ್ತಿಗಳಾದ ಸರ್ವಶ್ರೀ ಟಿ.ಕೆ. ತುಕೋಳ್ ಹಾಗೂ ಸಿ. ಹೊನ್ನಯ್ಯ ಇಂದು ರದ್ದುಪಡಿಸಿದರು.

ಕೃಷಿ ಸಾಲಗಾರರಿಗೆ ಪರಿಹಾರ ನೀಡುವ ಈ ಶಾಸನ ಸಂವಿಧಾನದ 14ನೆಯ ವಿಧಿಯನ್ನು ಉಲ್ಲಂಘಿಸುವುದು ಎಂದು ನ್ಯಾಯಮೂರ್ತಿಗಳು ತೀರ್ಪಿತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.