ADVERTISEMENT

50 ವರ್ಷಗಳ ಹಿಂದೆ: ಜನವರಿ 16, 1973

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 21:51 IST
Last Updated 15 ಜನವರಿ 2023, 21:51 IST
   

ಉತ್ತರ ವಿಯೆಟ್ನಾಂನಲ್ಲಿ ಅಮೆರಿಕ ಯುದ್ಧ ಅಂತ್ಯ
ಕಿಬೈಸಾಕಿನ್‌, ಫ್ಲಾರಿಡ, ಜ. 15–
ಉತ್ತರ ವಿಯೆಟ್ನಾಂ ಮೇಲೆ ಮಿಲಿಟರಿ ಆಕ್ರಮಣ ನಿಲ್ಲಿಸುವಂತೆ ಅಮೆರಿಕದ ಅಧ್ಯಕ್ಷ ನಿಕ್ಸನ್‌ ಅವರು ಆಜ್ಞೆ ಮಾಡಿದ್ದಾರೆ.

ಪ್ಯಾರಿಸ್‌ ಶಾಂತಿ ಮಾತುಕತೆಯಲ್ಲಿನ ಪ್ರಗತಿಯ ಕಾರಣದಿಂದಾಗಿ ಉತ್ತರ ವಿಯೆಟ್ನಾಂನಲ್ಲಿ ಎಲ್ಲ ಬಗೆಯ ಮಿಲಿಟರಿ ಆಕ್ರಮಣ ಚಟುವಟಿಕೆಗಳನ್ನು ನಿಲ್ಲಿಸುವಂತೆ ನಿಕ್ಸನ್‌ ಆಜ್ಞೆ ಮಾಡಿರುವುದಾಗಿ ಫ್ಲಾರಿಡ ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಬಿಇಎಲ್‌ಗೆ ಪೋಲೆಂಡ್‌ ಪ್ರಧಾನಿ ಭೇಟಿ
ಬೆಂಗಳೂರು, ಜ. 15–
ಪೋಲೆಂಡ್‌ನ ಪ್ರಧಾನಿ ಪಿಯೊಟರ್‌ ಜರೋಸ್ಲೆವಿಕ್‌ ಅವರು ಇಂದು ಬಿ.ಇ.ಎಲ್‌. ಕಾರ್ಖಾನೆಗೆ ಭೇಟಿ ನೀಡಿ, ಅಲ್ಲಿನ ಕಾರ್ಯವಿಧಾನಗಳನ್ನು ವೀಕ್ಷಿಸಿದರು.

ADVERTISEMENT

ಕಾರ್ಖಾನೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಪಿ.ಆರ್‌. ಸುಬ್ರಹ್ಮಣ್ಯನ್‌ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಖಾನೆಯ ನಾನಾ ವಿಭಾಗಗಳ ಪರಿಚಯ ಮಾಡಿಕೊಟ್ಟರು. ಬಿ.ಇ.ಎಲ್‌.ನ ಪ್ರಗತಿಯ ಬಗ್ಗೆ ಪೋಲೆಂಡ್‌ ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.