ADVERTISEMENT

50 ವರ್ಷಗಳ ಹಿಂದೆ: ಬುಧವಾರ –ನವೆಂಬರ್‌ 15, 1972

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 19:02 IST
Last Updated 14 ನವೆಂಬರ್ 2022, 19:02 IST
   

ನದಿ ಯೋಜನೆಗಳಲ್ಲಿ ವಿಳಂಬಕ್ಕೆ ಮೈಸೂರೇ ಹೊಣೆ: ಸಚಿವ ರಾವ್
ನವದೆಹಲಿ, ನ. 14–
ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳ ನಿರ್ಮಾಣದಲ್ಲಿ ಸಂಭವಿಸಿರುವ ವಿಳಂಬಕ್ಕೆ ಹೊಣೆಗಾರಿಕೆ ಸಂಪೂರ್ಣವಾಗಿ ಮೈಸೂರು ಸರ್ಕಾರದ್ದೇ ಆಗಿದೆಯೆಂದು ಕೇಂದ್ರ ನೀರಾವರಿ ಮತ್ತು ವಿದ್ಯುಚ್ಛಕ್ತಿ ಸಚಿವಡಾ. ಕೆ.ಎಲ್. ರಾವ್ ಲೋಕಸಭೆಯಲ್ಲಿ ತಿಳಿಸಿದರು.

ಯೋಜನೆಗಳಿಗೆ ಇಲ್ಲಿವರೆಗೆ ಕೇವಲ 68 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಒಟ್ಟು 260 ಕೋಟಿ ರೂ. ಬೇಕಾಗುವ ಆ ಮೂರು ಯೋಜನೆಗಳ ನಿರ್ಮಾಣ ಪೂರ್ಣಗೊಳಿಸಲು ಮೈಸೂರು ಸರ್ಕಾರ, ‘ಇನ್ನೂ ಬಹು ದೂರ ದಾರಿ ಸವೆಸಬೇಕಾಗಿದೆ’ ಎಂದು ಅವರು ಪ್ರಶ್ನೋತ್ತರ ಕಾಲದಲ್ಲಿ ವಿವರಿಸಿದರು.

ಅವಶ್ಯವಾದರೆ ಅಕ್ಕಿ, ದ್ವಿದಳ ಧಾನ್ಯ, ಗೋಧಿ ಆಮದು: ಚವಾಣ್
ನವದೆಹಲಿ, ನ. 14–
ಜನತೆಗೆ ಸರಿಯಾಗಿ ಸರಬರಾಜು ಮಾಡುವುದಕ್ಕಾಗಿ ಅವಶ್ಯವಾದರೆ ಅಕ್ಕಿ, ದ್ವಿದಳ ಧಾನ್ಯ ಮತ್ತು ಗೋಧಿಯನ್ನು ಆಮದು ಮಾಡಿಕೊಂಡುಬೆಲೆ ಮಟ್ಟವನ್ನು ಕಾಪಾಡುವ ದೃಢಸಂಕಲ್ಪವನ್ನು ಹಣಕಾಸು ಸಚಿವ ವೈ.ಬಿ. ಚವಾಣ್‌ ವ್ಯಕ್ತಪಡಿಸಿದ ನಂತರ, ಲೋಕಸಭೆ ಇಂದು ಸದ್ಯದ ಬೆಲೆ ಏರಿಕೆಗಾಗಿ ಸರ್ಕಾರವನ್ನು ಖಂಡಿಸಲು ವಿರೋಧ ಪಕ್ಷಗಳು ಮಂಡಿಸಿದ್ದ ನಿಲುವಳಿ ಸೂಚನೆಯನ್ನು ತಿರಸ್ಕರಿಸಿತು.

ADVERTISEMENT

ಕಮ್ಯುನಿಸ್ಟ್ ಪಕ್ಷದ ಸದಸ್ಯ ಎಸ್.ಎಂ. ಬ್ಯಾನರ್ಜಿ ಅವರು ಮಂಡಿಸಿ, ಎಲ್ಲ ವಿರೋಧ ಪಕ್ಷಗಳೂ ಬೆಂಬಲ ಕೊಟ್ಟಿದ್ದ ಆ ಸೂಚನೆ185– 34 ಮತಗಳಿಂದ ಬಿದ್ದುಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.