ADVERTISEMENT

50 ವರ್ಷದ ಹಿಂದೆ | ವರ್ಷದಲ್ಲಿ ಎರಡನೇ ಬಾರಿ ಜನತೆಗೆ ಮತ್ತಷ್ಟು ಕರಭಾರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 0:02 IST
Last Updated 23 ಜುಲೈ 2024, 0:02 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ವರ್ಷದಲ್ಲಿ ಎರಡನೇ ಬಾರಿ ಜನತೆಗೆ ಮತ್ತಷ್ಟು ಕರಭಾರ

ನವದೆಹಲಿ, ಜುಲೈ 22– ಕೇಂದ್ರ ಸರ್ಕಾರವು ಈ ವರ್ಷ ಎರಡನೇ ಬಾರಿಗೆ ಮತ್ತಷ್ಟು ತೆರಿಗೆ ವಿಧಿಸಿದೆ.

ಈ ಬಗ್ಗೆ ಹೆಚ್ಚುವರಿ ಮುಂಗಡಪತ್ರವನ್ನು ಈ ತಿಂಗಳ 30ರಂದು ಮಂಡಿಸಲಾಗುವುದು ಎಂದು ಕೇಂದ್ರ ಸಂಸತ್ ವ್ಯವಹಾರ ಖಾತೆ ಸಚಿವ ಕೆ. ರಘುರಾಮಯ್ಯ ಅವರು ಇಂದು ಲೋಕಸಭೆಗೆ ತಿಳಿಸಿದರು.

ADVERTISEMENT

ಹಣದುಬ್ಬರವನ್ನು ತಡೆಗಟ್ಟಲು ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವುದಕ್ಕೆ ಈ ವಿಧೇಯಕ ಅನುವು ಮಾಡಿಕೊಡುತ್ತದೆಂದೂ ರಘುರಾಮಯ್ಯ ಅವರು ತಿಳಿಸಿದರು.

ಗಡಿ ತಂಟೆ ಮಾಡಿದರೆ ಪಾಕ್‌ಗೆ ತಕ್ಕ ಶಾಸ್ತಿ: ರಾಂ ಎಚ್ಚರಿಕೆ

ನವದೆಹಲಿ, ಜುಲೈ 22– ಪಾಕಿಸ್ತಾನವು ಗಡಿಯಲ್ಲೇನಾದರೂ ತಂಟೆ ಮಾಡಿದರೆ ಭಾರತವು ಅದರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ರಕ್ಷಣಾ ಸಚಿವ ಜಗಜೀವನ ರಾಂ ಅವರು ಇಂದು ಎಚ್ಚರಿಕೆ ನೀಡಿದರು.

‘ಸಶಸ್ತ್ರ ಪಡೆಗಳು ಜಾಗರೂಕವಾಗಿವೆ. ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧ
ವಾಗಿವೆ’ ಎಂದು ರಾಜ್ಯಸಭೆಯಲ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.