ಚಳವಳಿ ನೇತೃತ್ವ ವಹಿಸಲು ಜೆ.ಪಿ ಸಿದ್ಧ
ಪಟನ, ಮಾ.30– ಶಾಂತಿಯುತ ಪ್ರತಿಭಟನೆ ಮತ್ತು ಕಾರ್ಯಾಚರಣೆ ನಡೆಸುವ ಹಕ್ಕನ್ನು ಜನತೆಗೆ ನಿರಾಕರಿಸುವ ಸರ್ಕಾರದ ಅಪ್ರಸ್ತುತ ನೀತಿ ಇದೇ ರೀತಿ ಮುಂದುವರಿದಲ್ಲಿ ಶಾಂತಿಸೈನಿಕರ ಮೌನಮೆರವಣಿಗೆ ಕರೆದೊಯ್ಯುವ ಅನಿವಾರ್ಯ ಕ್ರಮಕ್ಕೆ ತಾವು ಕೈ ಹಾಕಬೇಕಾಗುವುದೆಂದು ಸರ್ವೋದಯ ನಾಯಕ ಜಯಪ್ರಕಾಶ ನಾರಯಣ್ ಎಚ್ಚರಿಕೆ ನೀಡಿದ್ದಾರೆ. ‘ನನ್ನ ಆರೋಗ್ಯ ಸುಧಾರಿಸುದಕ್ಕೂ ಮುಂಚೆಯೆ ಶಾಂತಿ ಸೈನಿಕರ ಮೆರವಣಿಗೆಯನ್ನು ಸ್ವತಃ ನಾನೇ ಕರೆದೊಯ್ಯುವುದು ಅನಿವಾರ್ಯ ವಾಗುತ್ತದೆ’ ಎಂದು ಜಯಪ್ರಕಾಶ್ ನಾರಾಯಣ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.