ಗುರುವಾರ 18–7–1974
ವೇತನಶ್ರೇಣಿ ಪುನರ್ವಿಮರ್ಶೆಗೆ ಆಯೋಗ ರಚಿಸಲು ಕರ್ನಾಟಕ ಸರ್ಕಾರದ ನಿರ್ಧಾರ
ಬೆಂಗಳೂರು, ಜುಲೈ 17– ರಾಜ್ಯ ಸರ್ಕಾರಿ ನೌಕರರು, ಸ್ಥಳೀಯ ಸಂಸ್ಥೆಗಳು ಹಾಗೂ ಅನುದಾನ ಪಡೆಯುತ್ತಿರುವ ಸಂಸ್ಥೆಗಳ ಸಿಬ್ಬಂದಿಯ ವೇತನಶ್ರೇಣಿ ಪುನರ್ವಿಮರ್ಶೆಗೆ ಆಯೋಗವೊಂದನ್ನು ನೇಮಿಸಲು ಕರ್ನಾಟಕ ಸಚಿವ ಸಂಪುಟ ಇಂದು ನಿರ್ಧರಿಸಿತು.
ಕೆಲವು ದಿನಗಳಲ್ಲಿಯೇ ರಚಿತವಾಗುವ ಈ ಆಯೋಗವು ರಾಜ್ಯದ ಆರ್ಥಿಕ ಸೌಕರ್ಯದ ಚೌಕಟ್ಟಿನಲ್ಲಿ, ಯಾವ ರೀತಿಯಲ್ಲಿ ವೇತನಶ್ರೇಣಿ ಪುನರ್ವಿಮರ್ಶೆಯಾಗಬೇಕು
ಎಂಬುದರ ಬಗ್ಗೆ ವ್ಯಾಪಕ ಹಾಗೂ ಆಳವಾದ ಸಮೀಕ್ಷೆ ನಡೆಸುವುದು ಎಂದು ಅರ್ಥ ಹಾಗೂ ವಾರ್ತಾ ಮಂತ್ರಿ ಶ್ರೀ ಎಂ.ವೈ. ಘೋರ್ಪಡೆ ಅವರು ವರದಿಗಾರರಿಗೆ ತಿಳಿಸಿದರು.
ವೈದ್ಯರೂ ವಕೀಲರೂ ತೆರಿಗೆಗಳ್ಳರೇ!
ನವದೆಹಲಿ, ಜುಲೈ 17– ದೇಶದಲ್ಲಿರುವ ವೃತ್ತಿನಿರತ ವೈದ್ಯರಲ್ಲಿ ಕೇವಲ ಶೇ 50ರಷ್ಟು ಮಂದಿ ಆದಾಯ ತೆರಿಗೆ ಸಲ್ಲಿಸುತ್ತಿದ್ದಾರೆಂದು ಹಣಕಾಸು ಖಾತೆ ಸ್ಟೇಟ್ ಸಚಿವ ಕೆ.ಆರ್.ಗಣೇಶ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ವಕೀಲರೂ ಸೇರಿದಂತೆ ವೃತ್ತಿನಿರತರಲ್ಲಿ, ಸ್ವಯಂ ಉದ್ಯೋಗಿಗಳಲ್ಲಿ ತೆರಿಗೆಗಳ್ಳತನದ ಪ್ರಮಾಣ ಹೆಚ್ಚಾಗಿಯೇ ಇದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.
ಈ ವರ್ಗದವರಲ್ಲಿ ತೆರಿಗೆ ತಪ್ಪಿಸಿ
ಕೊಳ್ಳುವವರ ಸಮೀಕ್ಷೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಸೂಚಿಸಲಾಗಿದೆ ಎಂದು ಸಚಿವರು ಇಂದು ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.