ಸಂಸ್ಥೆ ಅಧಿಕಾರಗಳಲ್ಲಿ ಸಚಿವರ ಸಿಂಹಪಾಲು: ಎ.ಐ.ಸಿ.ಸಿ.ಯಲ್ಲಿ ಟೀಕೆ
ನವದೆಹಲಿ, ಜು. 19– ಪಕ್ಷದ ಉನ್ನತ ವೇದಿಕೆಗಳಾದ ಕಾರ್ಯಕಾರಿ ಸಮಿತಿ ಹಾಗೂ ಸಂಸದೀಯ ಮಂಡಲಿಗಳಲ್ಲಿ ಸಚಿವರುಗಳೇ ಪೂರ್ಣ ಮೇಲುಗೈ ಹೊಂದಿರುವುದನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿವೇಶನದಲ್ಲಿ ಇಂದು ಕಟುವಾಗಿ ಟೀಕಿಸಲಾಯಿತು.
ಪಕ್ಷದ ವೇದಿಕೆಗಳನ್ನು ಸರ್ಕಾರದ ಉಪಸಮಿತಿಗಳ ಮಟ್ಟಕ್ಕೆ ಅದುಮಲಾಗಿದೆ ಎಂದು ಪಕ್ಷದ ಅಂಗರಚನೆಯ ತಿದ್ದುಪಡಿ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಹಿರಿಯ ಸದಸ್ಯರು ನೊಂದು ನುಡಿದರು.
ಬಿಟ್ಟಿ ಊಟ, ವಸತಿ ವ್ಯವಸ್ಥೆ ಇಲ್ಲ
ನವದೆಹಲಿ, ಜುಲೈ 19– ಉಚಿತ ಬೋಜನ ಅಥವಾ ಸಾಗಾಣಿಕೆ ವ್ಯವಸ್ಥೆಗಳನ್ನು ನಿರೀಕ್ಷಿಸಬೇಡಿ ಎಂದು ಅಧಿವೇಶನದಲ್ಲಿ ಭಾಗವಹಿಸುವ ಸದಸ್ಯರಿಗೆ ತಿಳಿಸಲಾಗಿದೆ.
ಟೀ, ಕಾಫಿ ಬಿಟ್ಟರೆ ಬೇರಾವ ತಿಂಡಿ ತೀರ್ಥಗಳೂ ಇಲ್ಲ. ವಸತಿ ವ್ಯವಸ್ಥೆಗಳನ್ನೂ ಸಹ ಸದಸ್ಯರೇ ನೋಡಿಕೊಳ್ಳಬೇಕೆಂದು ತಿಳಿಸಲಾಗಿದೆ.
ಈ ಅಧಿವೇಶನದ್ದು ಅತಿ ಸರಳ ಹಾಗೂ ಮಿತವ್ಯಯದ ವ್ಯವಸ್ಥೆ. ಪ್ಲೇಟ್ ಊಟದ ಬೆಲೆ ಎರಡು ರೂ. ಮಿತವ್ಯಯ ದರ್ಜೆಯ
ಒಂದು ರೂ. ಊಟವೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.